ಸುಳ್ಯ:ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಪೋಷಕರ ಸಭೆ ಕಾಲೇಜಿನ ಆಡಿಟೋರಿಯಂನಲ್ಲಿ ನಡೆಯಿತು.
ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ. ಪೋಷಕರ ಸಭೆಯನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಹೊಸ ಶೈಕ್ಷಣಿಕ ಪದ್ಧತಿಯು ಹೊಸ ವಿದ್ಯಾಮಾನಕ್ಕೆ ಹೇಗೆ ಸಹಕಾರಿಯಾಗುತ್ತದೆ ಮತ್ತು ಕಾಲೇಜಿನಲ್ಲಿ ಹೊಸ
ಶೈಕ್ಷಣಿಕ ಪದ್ಧತಿಗೆ ಬೇಕಾದ ಹಾಗೆ ಕಾಲೇಜಿನ ಎಲ್ಲಾ ಲ್ಯಾಬೋರೇಟರಿಗಳನ್ನು ಸಿದ್ಧಪಡಿಸಿದ್ದರ ಜೊತೆಗೆ ಮಕ್ಕಳ ಸರ್ವತೋಮುಖ ಕೌಶಲ್ಯ ಅಭಿವೃದ್ಧಿಗೆ ಕಾಲೇಜಿನ ಉಪನ್ಯಾಸಕ ವೃಂದ ಬದ್ಧವಾಗಿದೆ. ಹಾಗೆಯೇ ಮಕ್ಕಳಿಗೆ ಕೊನೆಯ ಸೆಮಿಸ್ಟರ್ ತಲುಪುವುದರ ವೇಳೆಗೆ ಒಂದು ಪ್ರತಿಷ್ಠಿತ ಕಂಪನಿಯಲ್ಲಿ ನೌಕರಿ ಪಡೆಯಲು ನಮ್ಮ ಕಾಲೇಜಿನ ಪ್ಲೇಸ್ಮೆಂಟ್ ತಂಡ ವಿವಿಧ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಿರೂಪಿಸಿದೆ ಎಂದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ ವಿ. ವಹಿಸಿ ಪೋಷಕರ ಜೊತೆ ಸಂವಹನ ಕಾರ್ಯಕ್ರಮದಲ್ಲಿ ಭಾಗವಹಿಸಿ ಶೈಕ್ಷಣಿಕ ವರ್ಷದಲ್ಲಿ ನಡೆಸಿದ ಕಾರ್ಯಕ್ರಮಗಳ ವಿವರಗಳನ್ನು ತಿಳಿಸಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೋಷಕರ ಸಹಕಾರವನ್ನು ಕೋರಿದರು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಸಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಮತ್ತು ಕೆವಿಜಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಳವಡಿಸಿರುವುದರ ಕುರಿತು ವಿವರಿಸಿದರು.
ಇತ್ತೀಚೆಗೆ ವಿಶ್ವವಿದ್ಯಾನಿಲಯಕ್ಕೆ ಮೆಕ್ಯಾನಿಕಲ್ ವಿಭಾಗದಲ್ಲಿ ಪ್ರಥಮ ರಾಂಕ್ ನೊಂದಿಗೆ ಎಂಟು ಚಿನ್ನದ ಪದಕ ತೆಗೆದುಕೊಂಡ ವಿದ್ಯಾರ್ಥಿನಿ ಕೃತಿ ಮತ್ತು ಸಿವಿಲ್ ಇಂಜಿನಿಯರಿಂಗ್ ಸ್ನಾತಕೋತ್ತರ ವಿಭಾಗದಲ್ಲಿ ಪ್ರಥಮ ರಾಂಕ್ನೊಂದಿಗೆ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ಪ್ರಜ್ಞ ಅವರ ಬಗ್ಗೆ ಮಾಹಿತಿ ನೀಡಿ, ಇವೆಲ್ಲವೂ ಕಾಲೇಜಿನ ಶೈಕ್ಷಣಿಕ ಗುಣಮಟ್ಟಕ್ಕೆ ಸಾಕ್ಷಿ ಅಂದರು.
ಸಮಾರಂಭಕ್ಕೆ ಆಗಮಿಸಿದ ಎಲ್ಲಾ ಪೋಷಕರನ್ನು ಮತ್ತು ಶಿಕ್ಷಕ ವೃಂದದವರನ್ನು ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ಶ್ರೀಧರ್ ಕೆ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕರಾದ ಡೀನ್ -ಅಕಾಡೆಮಿಕ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಉಮಾಶಂಕರ್ ಕೆ ಎಸ್ ಕಾರ್ಯಕ್ರಮವನ್ನು ಸಂಯೋಜಿಸಿ ವಂದಿಸಿದರು. ವಿದ್ಯಾರ್ಥಿಗಳ ಮೆಂಟರ್ ಗಳು ಮತ್ತು ಪೋಷಕರೊಂದಿಗೆ ಶೈಕ್ಷಣಿಕ ಸಮಾಲೋಚನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ರಾಸಾಯನ ಶಾಸ್ತ್ರ ಮುಖ್ಯಸ್ಥೆ ಡಾ. ಸುರೇಖಾ ಎಂ, ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಡಾ ಪ್ರವೀಣ ಎಸ್ ಡಿ, ವಿದ್ಯುನ್ಮಾನ ಮತ್ತು ತಂತ್ರಜ್ಞಾನ ವಿಭಾಗ ಮುಖ್ಯಸ್ಥ ಡಾ ಕುಸುಮಾಧರ ಎಸ್, ಕಾಲೇಜಿನ ಆಡಳಿತಾಧಿಕಾರಿ ನಾಗೇಶ್ ಕೊಚ್ಚಿ ಪ್ಲೇಸ್ಮೆಂಟ್ ಹೆಡ್ ಪ್ರೊ. ಅನಿಲ್ ಬಿ.ವಿ, ಮೆಂಟರ್ಗಳಾದ ಪ್ರೊ ಮಂಜುಳಾ, ಪ್ರೊ ರೇಖಾ ಎಂ ಬಿ, ಪ್ರೊ ಅಜಿತ್ ಬಿ ಟಿ, ಪ್ರೊ ಕಿರಣ್, ಪ್ರೊ ಅಭಿಜ್ಞಾ ಬಿ ಬಿ, ಪ್ರೊ ಅಶ್ವಿಜ ಕೆ ಸಿ, ಪ್ರೊ ಸೌಮ್ಯ ಎಂ ಕೆ, ಪ್ರೊ ಕೃಷ್ಣರಾಜ್, ಪ್ರೊ ಸತ್ಯಜಿತ್ ಪಾಲುಗೊಂಡು ಕಾರ್ಯಕ್ರಮಕ್ಕೆ ಸಹಕರಿಸಿದರು.