ಸುಳ್ಯ:ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 2024-25ನೇ ಸಾಲಿನ ಎಂ.ಟೆಕ್ ಪರೀಕ್ಷೆಯಲ್ಲಿ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ. 5 ಮಂದಿ ವಿದ್ಯಾರ್ಥಿಗಳು ಎಂಟೆಕ್ ಪರೀಕ್ಷೆಯಲ್ಲಿ

ಮಯೂರ್,ತನೇಶ್,ಪ್ರಮೋದ್, ಸ್ವಾತಿ,ಹರ್ಷಿತಾ
ರ್ಯಾಂಕ್ ಪಡೆದಿದ್ದಾರೆ. ಸಿವಿಲ್ ಇಂಜಿನಿಯರಿಂಗ್ – ಎಂ.ಟೆಕ್ ವಿಭಾಗದ ವಿದ್ಯಾರ್ಥಿ ಮಯೂರ್ ಕೊಥಾರ್ಕರ್ ಪ್ರಥಮ ರ್ಯಾಂಕ್ ಮತ್ತು ಚಿನ್ನದ ಪದಕ, ತನೇಶ್ ಸಿ.ಜಿ. 3ನೇ ರ್ಯಾಂಕ್, ಪ್ರಮೋದ್ ಗೌಡ 3ನೇ ರ್ಯಾಂಕ್ ಹಾಗೂ ವಿದ್ಯಾರ್ಥಿನಿಯರಾದ ಸ್ವಾತಿ ಡಿ. 4ನೇ ರ್ಯಾಂಕ್ ಹಾಗೂ ಹರ್ಷಿತಾ ಪಿ.ಬಿ. 4ನೇ ರ್ಯಾಂಕ್ ಪಡೆದುಕೊಂಡಿರುತ್ತಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.





