ಸುಳ್ಯ:ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ ಯುವಜನರ ಪಾತ್ರ-ವಿಷನ್ 2047 ಎಂಬ ವಿಷಯದಲ್ಲಿ ಸಂವಹನ ಕಾರ್ಯಕ್ರಮವು
ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಿತು. ಕೆ.ವಿ.ಜಿ.ಸಿ.ಇ. ಅಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೇಂದ್ರ ಸರಕಾರದ ದಿಶಾ ಕಮಿಟಿಯ ಸದಸ್ಯರಾದ
ಕೆ. ರಮೇಶ್ ಆಗಮಿಸಿ, ಸರಕಾರದ ಅನುದಾನಿತ ಯೋಜನೆಗಳ ಬಗ್ಗೆ
ವಿವರಿಸಿದರು. ಭಾರತೀಯ ಪ್ರಜೆಯಾಗಿ ಪ್ರತಿಯೊಬ್ಬರ ಜವಾಬ್ದಾರಿಯು ದೇಶದ ಒಳಿತಿಗಾಗಿ ವಿನಿಯೋಗವಾಗಬೇಕೆಂದು ಪ್ರಸ್ತುತಪಡಿಸಿದರು.

ಅತಿಥಿಯಾಗಿದ್ದ ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಮಾತನಾಡಿ, ಸುಳ್ಯದಲ್ಲಿ ಕಸದ ಸಮಸ್ಯೆಗೆ ತೆಗೆದುಕೊಂಡ ಕ್ರಮ ಮತ್ತು ಕಸವನ್ನು ವಿದ್ಯುತ್ ಸಮಸ್ಯೆಗೆ ಪರಿಹಾರವಾಗಿ ಉಪಯೋಗಿಸಿಕೊಂಡ ಪ್ರಾಜೆಕ್ಟ್ ಬಗ್ಗೆ ವಿವರಿಸಿ ಮುಂಬರುವ ದಿನಗಳಲ್ಲಿ ಸುಳ್ಯದ ಕೆಲವು ಸಮಸ್ಯೆಗಳಿಗೆ ತಾಂತ್ರಿಕ ನೆರವಿನ ಅಗತ್ಯತೆಯನ್ನು ಕಾಲೇಜಿನ ವಿದ್ಯಾರ್ಥಿಗಳು ಯಾವ ರೀತಿ ಕೈಜೋಡಿಸಿ ಪರಿಹಾರ ಒದಗಿಸುವ ಬಗ್ಗೆ ವಿಮರ್ಷಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ ವಿ. ವಹಿಸಿದರು. ಕಾರ್ಯಕ್ರಮ ಸಂಯೋಜಕರಾದ ಡೀನ್-ಅಕಾಡೆಮಿಕ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು
ಡಾ. ಉಮಾಶಂಕರ್ ಕೆ.ಎಸ್. ಅತಿಥಿಗಳನ್ನು ಸ್ವಾಗತಿಸಿದರು. ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರಾದ ಡಾ. ಚಂದ್ರಶೇಖರ್ ಎ. ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕಾರಾದ ಪ್ರೊ. ಪ್ರಶಾಂತ್ ಕಕ್ಕಾಜೆ ಸಹಕರಿಸಿದರು.