ಸುಳ್ಯ:ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಸಂಘ-ಸೆನ್ಸಾ ದ ಉದ್ಘಾಟನಾ ಸಮಾರಂಭ ಸ್ವಾಗತ ಕಾರ್ಯಕ್ರಮ ‘ಆಗಮನ’ ದಿನಾಂಕ ಅಮರಶ್ರೀ ಸಮುದಾಯ ಭವನದಲ್ಲಿ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸಮಾರಂಭದ ಮುಖ್ಯ ಅತಿಥಿಗಳಾದ ಶ್ರೀ ಪ್ರವೀಣ್ ಡಿ. ಚೀಫ್ ಟೆಕ್ನಾಲಜಿ ಆಫೀಸರ್, ಡ್ಯಾಷಿನ್ ಟೆಕ್ನೋಸಾಫ್ಟ್ ಪ್ರೈವೇಟ್ ಲಿಮಿಟೆಡ್ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ
ಪ್ರಸಕ್ತ ವಿದ್ಯಾಮಾನಗಳ ನಡುವೆ ಐಟಿ ಕ್ಷೇತ್ರದ ಉದ್ಯೋಗದ ಬಗ್ಗೆ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಕಾಲೇಜಿನ ಹಳೆವಿದ್ಯಾರ್ಥಿನಿ ಜಾಸ್ಮಿನ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥರಾದ ಡಾ. ಬಾಲಪ್ರದೀಪ್ ಕೆ.ಎನ್, ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಸುರೇಶ ವಿ. ಮಾತನಾಡಿದರು.
ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಸೃಜನ ಕುಮಾರ್ ಸ್ವಾಗತಿಸಿ, ಕಾರ್ಯದರ್ಶಿ ಸೋನಿಕಾ ವಾರ್ಷಿಕ ವರದಿಯನ್ನು ಓದಿದರು. ತಾಂತ್ರಿಕ ಜತೆಕಾರ್ಯದರ್ಶಿ ಗೌತಮಿ ದೇರಾಜೆ ವಂದಿಸಿದರು. ಸಂಯೋಜಕರಾದ ಪ್ರೊ. ಕಿಶೋರ್ ಕುಮಾರ್ ಕೆ.,
ಪ್ರೊ. ವೆಂಕಟೇಶ್ ಯು.ಸಿ. ಹಾಗೂ ಕೋಶಾಧಿಕಾರಿ ಡಾ. ಸವಿತಾ ಸಿ.ಕೆ., ಸೆನ್ಸಾ ಸಲಹೆಗಾರರಾದ ಡಾ. ಪ್ರಜ್ಞ ಎಂ.ಆರ್ ಹಾಗೂ ವಿಭಾಗದ ಎಲ್ಲಾ ಉಪನ್ಯಾಸಕರು ಹಾಗು ಸಿಬ್ಬಂಧಿ ವರ್ಗದವರು ಉಪಸ್ಥಿತರಿದ್ದರು. ಅಂತಿಮ ವರ್ಷದ ವಿದ್ಯಾರ್ಥಿಗಳಾದ ಕಾರ್ತಿಕ ಮತ್ತು ತ್ರಿಶಾಲಿ ಕಾರ್ಯಕ್ರಮವನ್ನು ನಿರೂಪಿಸಿದರು.













