ಸುಳ್ಯ:ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ. ವಿದ್ಯಾರ್ಥಿಗಳಿಂದ 2025-26 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾಜೆಕ್ಟ್ ಪ್ರದರ್ಶನ ಮತ್ತು ಸ್ಪರ್ಧೆ, ‘ಪ್ರಾಜೆಕ್ಟ್ ಎಕ್ಸ್ಪೋ–2025-26” ನಡೆಯಿತು. ಪ್ರದರ್ಶನದ ಉದ್ಘಾಟನೆಯನ್ನು ಕೆ.ವಿ.ಜಿ. ಐ.ಟಿ.ಐ. ಪ್ರಾಂಶುಪಾಲ ದಿನೇಶ್ ಮಡ್ತಿಲ ನೆರವೇರಿಸಿದರು. ಕಾಲೇಜಿನ
ಪ್ರಾಂಶುಪಾಲ ಡಾ. ಸುರೇಶ ವಿ ಮಾತಾನಾಡಿದರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಪ್ರೊ. ರಾಘವೇಂದ್ರ ಬಿ. ಕಾಮತ್ ವಂದಿಸಿದರು. ಸಿವಿಲ್ ಇಂಜಿನಿಯರಿಂಗ್ ವಿಭಾಗದ ಡಾ.ಲೇಖ ಬಿ.ಎಂ ಮತ್ತು ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ಪ್ರೊ. ಭವ್ಯ ಪಿ.ಎಸ್. ನಿರೂಪಿಸಿದರು. ಕಾಲೇಜಿನ ನಾಲ್ಕು ಇಂಜಿನಿಯರಿಂಗ್ ವಿಭಾಗಗಳಿಂದ ಒಟ್ಟು 118 ಕ್ಕಿಂತಲೂ ಅಧಿಕ ಪ್ರಾಜೆಕ್ಟ್ಗಳು ಪ್ರದರ್ಶಿತಗೊಂಡವು. ಉಪಪ್ರಾಂಶುಪಾಲರು ಮತ್ತು ಗಣಿತ ವಿಭಾಗದ ಮುಖ್ಯಸ್ಥರು ಡಾ. ಶ್ರೀಧರ್ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಲ್ಲಾ ಡೀನ್ಗಳು, ವಿದ್ಯಾರ್ಥಿ ಕ್ಷೇಮಾಧಿಕಾರಿ, ಕಾಲೇಜಿನ ಆಡಳಿತಾಧಿಕಾರಿ, ಎಲ್ಲಾ ವಿಭಾಗಗಳ ಮುಖ್ಯಸ್ಥರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.












