ಸುಳ್ಯ:ರಾಷ್ಟ್ರ ಮಟ್ಟದ ಗೋ-ಕಾರ್ಟ್ ಡಿಸೈನ್ ಚಾಲೆಂಜ್ನಲ್ಲಿ ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿಗೆ ಚಾಂಪಿಯನ್ಶಿಪ್ ಲಭಿಸಿದೆ. ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನ, ಮೆಕ್ಯಾನಿಕಲ್ ವಿಭಾಗದ ಸಹಯೋಗದೊಂದಿಗೆ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮೇಕರ್ಸ್ ಲ್ಯಾಬ್ನಲ್ಲಿ ಸಿದ್ಧಪಡಿಸಿದ ವಾಯುಜೀತ್ ರೇಸಿಂಗ್ ವಿ.ಆರ್. ೬.೦ ಗೋ-ಕಾರ್ಟ್ ಆರನೇ ರೇಸಿಂಗ್ ವೆಹಿಕಲ್ ಆಗಿದ್ದು ಫೆಬ್ರವರಿ ೧೧ ರಿಂದ ೧೯ರ ತನಕ ಕೊಯಂಮತ್ತೂರ್ನ
ಕಾರಿ ಮೋಟಾರ್ ಸ್ಪೀಡ್ ವೇನಲ್ಲಿ ರಾಷ್ಟ್ರಮಟ್ಟದಲ್ಲಿ ಚಾಂಪಿಯನ್ಶಿಪ್ ಗೆದ್ದುಕೊಂಡಿದೆ. ಸ್ವತ: ವಿದ್ಯಾರ್ಥಿಗಳೇ ಕಾಲೇಜಿನ ಮೇಕರ್ಸ್ ಲ್ಯಾಬ್ನಲ್ಲಿ ಅಭಿವೃದ್ಧಿ ಪಡಿಸಿದ್ದು ಹಿಂದಿನ ಐದು ವಾಹನಕ್ಕಿಂತ ಹೆಚ್ಚಿನ ತಾಂತ್ರಿಕತೆಯನ್ನು ಹೊಂದಿದೆ. ವಿಜೇತ ತಂಡದ ಸನ್ಮಾನ ಕಾರ್ಯಕ್ರಮ ಕಾಲೇಜಿನ ಆಡೀಟೋರಿಯಂ ನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ

ಸುಳ್ಯ ಚೆಂಬರ್ ಆಫ್ ಕಾಮರ್ಸ್ನ ಅಧ್ಯಕ್ಷರಾದ ಪಿ.ಬಿ.ಸುಧಾಕರ ರೈ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತಾ, ವಿದ್ಯಾರ್ಥಿಗಳು ಉನ್ನತ ಮಟ್ಟಕ್ಕೆ ಏರಿದರೂ ವಿದ್ಯಾರ್ಜನೆ ಮಾಡಿದ ಶಿಕ್ಷಕರನ್ನು ಹಾಗೂ ಶಿಕ್ಷಣ ಸಂಸ್ಥೆಯನ್ನು ಹಾಗೂ ಹಿರಿಯರನ್ನು ಗೌರವದಿಂದ ಕಾಣಬೇಕು ಎಂದು ಯುವಜನತೆಗೆ ಕಿವಿಮಾತು ಹೇಳಿದರು.
ಗೌರವ ಅತಿಥಿಗಳ ನೆಲೆಯಲ್ಲಿ ಮಾತನಾಡಿದ ವಿಟಿಯುನ ಎಕ್ಸೆಕ್ಯುಟಿವ್ ಕೌನ್ಸಿಲ್ ಸದಸ್ಯರು, ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರಾದ ಡಾ. ಉಜ್ವಲ್ ಯು.ಜೆ. ಹೊಸ ಆವಿಷ್ಕಾರಗಳು ಕಲಿಕೆಯೊಂದಿಗೆ ಮಹತ್ವದ ಪಾತ್ರವಹಿಸುತ್ತದೆ ಹಾಗೂ ಹೊಸ ಶಿಕ್ಷಣ ಪದ್ಧತಿಯ ಪ್ರಕಾರ ಇದೊಂದು ಮಹತ್ವದ ಬೆಳವಣಿಗೆ, ಕೆ.ವಿ.ಜಿ.ಸಿ.ಇ.ಯ ಮೇಕರ್ಸ್ ಲ್ಯಾಬ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಇತರ ಬ್ರಾಂಚ್ಗಳಾದ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್, ಆರ್ಟಿಫಿಶಿಯಲ್ ಇಂಟೆಲಿಜ್ನ್ಸ್ & ಮೆಶಿನ್ ಲರ್ನಿಂಗ್ ಹಾಗೂ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಾಂತ್ರಿಕತೆಯನ್ನು ಹೆಚ್ಚಿಸುವುದರ ಜೊತೆಗೆ ಹೊಸ ವಿಷಯಗಳನ್ನು ಕಲಿಯುವಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸಿದೆ ಎಂದರು. ಹಾಗೂ

ಇದೇ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಪಡೆದ ತಂಡಕ್ಕೆ ರೂ.40,000 ನಗದು ಬಹುಮಾನವಾಗಿ ನೀಡಿ ಅಭಿನಂದಿಸಿದರು. ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ ವಿ, ರೇಸಿಂಗ್ ಟೀಮ್ನ ರೇಸ್ ಡೈರೈಕ್ಟರ್ರಾದ ಕಾಲೇಜಿನ ಡೀನ್-ಅಕಾಡೆಮಿಕ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಉಮಾಶಂಕರ್ ಕೆ.ಎಸ್, ವಾಯುಜಿತ್೬.೦ ತಂಡದ ಮಾರ್ಗದರ್ಶಕರಾದ ಭರತ್ ಪಿಂಡಿಮನೆ ಮಾತನಾಡಿದರು.
ಡಾ. ಉಮಾಶಂಕರ್ ಕೆ.ಎಸ್, ಭರತ್ ಪಿಂಡಿಮನೆ, ಡಾ.ಸುರೇಶ ವಿ, ಡಾ. ಉಜ್ವಲ್ ಯು.ಜೆ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಿದರು. ಡಾ. ಉಜ್ವಲ್ ಯು.ಜೆ ಅವರನ್ನು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಸನ್ಮಾನಿಸಲಾಯಿತು. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಪ್ರಶಾಂತ್ ಕಕ್ಕಾಜೆ ಅತಿಥಿಗಳನ್ನು ಸ್ವಾಗತಿಸಿದರು. ಪ್ರೊಫೆಸರ್ ಅಭಿಜ್ಞ ಬಿ.ಬಿ. ವಂದಿಸಿದರು ಹಾಗೂ ಪ್ರೊಫೆಸರ್ ರಾಘವೇಂದ್ರ ಕಾಮತ್ ಮತ್ತು ಪ್ರೊಫೆಸರ್ ಸುಧೀರ್ ಕೆ.ವಿ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಉಪಪ್ರಾಂಶುಪಾಲ, ವಿವಿಧ ವಿಭಾಗಗಳ ಮುಖ್ಯಸ್ಥರುಗಳು, ಪ್ರಾಧ್ಯಾಪಕ ವೃಂದ, ಶ್ರೀ ನಾಗೇಶ್ ಕೊಚ್ಚಿ ಮತ್ತು ವಿದ್ಯಾರ್ಥಿವೃಂದ ಉಪಸ್ಥಿತರಿದ್ದರು.









