ಸುಳ್ಯ:ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಕೆ.ವಿ.ಜಿ. ಸಮುದಾಯ ಭವನ, ಅಮರಶ್ರೀಭಾಗ್ನಲ್ಲಿ ನಡೆಯಿತು. ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಗವರ್ನಿಂಗ್ ಕೌನ್ಸಿಲ್ ಮೆಂಬರ್ ಮೌರ್ಯ ಆರ್. ಪ್ರಸಾದ್ ಕಾರ್ಯಕ್ರಮವನ್ನು ಉದ್ಘಾಟಿಸಿದ ಶುಭ ಹಾರೈಸಿದರು. ಮಂಗಳೂರಿನ ಶ್ರೀದೇವಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ
ಪ್ರಾಂಶುಪಾಲರಾದ ಡಾ. ಕೆ.ಇ. ಪ್ರಕಾಶ್ ಮುಖ್ಯ ಅತಿಥಿಯಾಗಿದ್ದರು..
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿಟಿಯು ಬೆಳಗಾವಿ ಇದರ ಎಕ್ಷೆಕ್ಯುಟೀವ್ ಮೆಂಬರ್ ಮತ್ತು ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ ಮಾತನಾಡಿ ಡಾ. ರೇಣುಕಾಪ್ರಸಾದ್ ಕೆ.ವಿ.ಯವರು ಅವರ ಆಶಯದಂತೆ ಸಂಸ್ಥೆ ಸಧೃಡವಾಗಿ ಕಾರ್ಯನಿರ್ವಹಿಸುತ್ತಿದೆ. ನಮ್ಮ ಸಂಸ್ಥೆಯಲ್ಲಿ ವಿಶ್ವಾಸವಿರಿಸಿ ನಿಮ್ಮ ಮಕ್ಕಳನ್ನು ಕಳುಹಿಸಿದ್ದೀರಿ. ನಿಮ್ಮ ಕನಸನ್ನು ನನಸಾಗಿಸುವ ಜವಾಬ್ದಾರಿ ನಮ್ಮ ಮೇಲಿದೆ. ಕಳೆದ ವರ್ಷದಲ್ಲಿ ಶೇ. 95 ಕ್ಯಾಂಪಸ್ ಸೆಲೆಕ್ಷನ್ ಆಗಿದೆ ಎಂದರು. ಇಲ್ಲಿ ಅಧ್ಯಯನ ನಡೆಸುವ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗ ಪಡೆಯುವ ಅವಕಾಶ ಇದೆ ಎಂದರು.
ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುರೇಶ್ ವಿ, ಸಿವಿಲ್ ವಿಭಾಗದ ಮುಖ್ಯಸ್ಥರಾದ ಡಾ. ಚಂದ್ರಶೇಖರ್ ಎ, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಪ್ರೊ.ರಾಘವೇಂದ್ರ ಕಾಮತ್, ಇಲೆಕ್ಟ್ರಿಕಲ್ ಎಂಡ್ ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥ ಡಾ. ಕುಸುಮಾಧರ್, ಎಂ.ಬಿ.ಎ. ವಿಭಾಗದ ಮುಖ್ಯಸ್ಥ ಪ್ರೊ.ಕೃಷ್ಣಾನಂದ ಎ, ಎ.ಐ.ಎಂ.ಎಲ್ ವಿಭಾಗದ ಮುಖ್ಯಸ್ಥೆ ಡಾ. ಸವಿತಾ ಸಿ.ಕೆ, ಡೀನ್ ಎಡ್ಮಿಷನ್ ಪ್ರೊ. ಬಾಲಪ್ರದೀಪ್, ಫಿಸಿಕ್ಸ್ ವಿಭಾಗ ಮುಖ್ಯಸ್ಥರಾದ ಡಾ. ಪ್ರವೀಣ್ ಎಸ್.ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಸ್ಟೂಡೆಂಟ್ ಇಂಡಕ್ಷನ್ ಪ್ರೋಗ್ರಾಂ ಹ್ಯಾಂಡ್ ಬುಕ್ಕನ್ನು ಡಾ. ಉಜ್ವಲ್ ಯು.ಜೆ, ಗ್ರಾಜ್ಯುವೇಷನ್ ಡೇ ರಿಪೋರ್ಟನ್ನು ಡಾ. ಕೆ.ಇ. ಪ್ರಕಾಶ್ ಮತ್ತು ಕಾಲೇಜಿನ ವೆಬ್ ಸೈಟ್ ನ್ನು ಮೌರ್ಯ ಆರ್. ಪ್ರಸಾದ್ ಉದ್ಘಾಟಿಸಿದರು. ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ವಿದ್ಯಾರ್ಥಿಗಳಾದ ಪೂಜಾ ಮತ್ತು ತ್ರಿಶಾಲಿ ಪ್ರಾರ್ಥಿಸಿದರು. ಕಾಲೇಜಿನ ಉಪಪ್ರಾಂಶುಪಾಲ ಹಾಗೂ ಗಣಿತಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ಶ್ರೀಧರ್ ಕೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.ಟ್ರೈನಿಂಗ್ & ಪ್ಲೇಸ್ಮೆ೦ಟ್ ಆಫೀಸರ್ ಪ್ರೊ. ಪ್ರಶಾಂತ್ ಕೆ.ಅತಿಥಿಯನ್ನು ಪರಿಚಯಿಸಿದರು.ಕಾರ್ಯಕ್ರಮದ ಸಂಯೋಜಕಿ ಹಾಗೂ ಡೀನ್-ಅಕಾಡೆಮಿಕ್ ಡಾ. ಪ್ರಜ್ಞಾ ಎಂ.ಆರ್ ವಂದಿಸಿದರು. ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರೊ. ಶೃತಿ ಮತ್ತು ಪ್ರೊ. ನಸೀಮಾ ಸಿ.ಎ. ಕಾರ್ಯಕ್ರಮ ನಿರೂಪಿಸಿದರು. ಪೋಷಕರ ಪರವಾಗಿ ಎ.ಕೆ. ಮೋಹನ್ ಮತ್ತು ಸುಬ್ರಹ್ಮಣ್ಯ ಕುಳ ಅಭಿಪ್ರಾಯ ವ್ಯಕ್ತಪಡಿಸಿದರು.