ಸುಳ್ಯ:ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ವತಿಯಿಂದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಜನವರಿ 26ರಂದು ಕಾಲೇಜಿನ ಆವರಣದಲ್ಲಿ ನೆರವೇರಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕಾಲೇಜಿನ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಡಾ. ಉಜ್ವಲ್ ಯು ಜೆ ಭಾಗವಹಿಸಿ ಧ್ವಜಾರಣವನ್ನು ನೆರವೇರಿಸಿ ಕಾರ್ಯಕ್ರಮಕ್ಕೆ ಶುಭಾಶಯಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ
ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ಶ್ರೀಧರ್ ಕೆ ,ಎಂಬಿಎ ವಿಭಾಗದ ಮುಖ್ಯಸ್ಥರಾದ ಕೃಷ್ಣಾನಂದ ಎ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ
ಡಾ ಚಂದ್ರಶೇಖರ್ ಎ , ದೈಹಿಕ ಶಿಕ್ಷಕರಾದ ಭಾಸ್ಕರ್ ಬೆಳೆಗದ್ದೆ, ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕರಾದ ಪ್ರೊ ಡಾ ಸ್ಮಿತಾ ಉಜ್ವಲ್ , ಮುಖ್ಯ ಗ್ರಂಥ ಪಾಲಕರಾದ ಸೀತಾರಾಮ ಪಿ ಬಿ, ಎಂಬಿಎ ವಿಭಾಗದ ಉಪನ್ಯಾಸಕ ಮನೋಹರ ,ಕಾಲೇಜಿನ ಆಡಳಿತಾಧಿಕಾರಿಯಾದ ನಾಗೇಶ್ ಕೊಚ್ಚಿ. ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು









