ಸುಳ್ಯ:ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಓಣಂ ಹಬ್ಬವನ್ನು ಆಚರಿಸಲಾಯಿತು. ಪೂಕಳಂ ಚಿತ್ತಾರ ಹಾಗೂ ಮಹಾಬಲಿ ಚಕ್ರವರ್ತಿಯ ವೇಷಧಾರಿಯ ಪ್ರವೇಶವನ್ನು ಚೆಂಡೆ ಮೇಳದೊಂದಿಗೆ ಡೈರೆಕ್ಟರ್, ಕಮಿಟಿ ‘ಬಿ’ ಎ.ಒ.ಎಲ್.ಇ. ಸುಳ್ಯ, ಮೌರ್ಯ ಆರ್. ಕುರುಂಜಿ ಅವರು ಸ್ವಾಗತಿಸಿದರು. ಸಭಾಕಾರ್ಯಕ್ರಮವನ್ನು

ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ ವಿ ಅವರು ಉದ್ಘಾಟಿಸಿದರು. ವೇದಿಕೆಯಲ್ಲಿ ಎಂ.ಬಿ.ಎ. ವಿಭಾಗ ಮುಖ್ಯಸ್ಥರಾದ ಪ್ರೊ. ಕೃಷ್ಣಾನಂದ ಎ., ವಿದ್ಯಾರ್ಥಿ ಸಲಹೆಗಾರ ಪ್ರೊ. ಮನೋಹರ ಎ.ಎನ್. ಹಾಗೂ ವಿಶೇಷ ಅತಿಥಿ ಮಹಾಬಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತದನಂತರ ಎಂಬಿ.ಎ. ವಿದ್ಯಾರ್ಥಿಗಳು ತಿರುವಾದಿರ ನೃತ್ಯವನ್ನು ಪ್ರಸ್ತುತಪಡಿಸಿ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡರು. ವಿದ್ಯಾರ್ಥಿಗಳಿಗಾಗಿ ಓಣಂ ಸದ್ಯ ಬೋಜನ ಕೂಟವನ್ನು ಏರ್ಪಡಿಸಲಾಯಿತು. ಕಾರ್ಯಕ್ರಮವನ್ನು ಲೀಷ್ಮಾ ಎಂ.ಎಂ. ಸ್ವಾಗತಿಸಿ, ದೀಕ್ಷಿತ್ ವಂದಿಸಿದರು. ಸಾಯಿಸ್ಮೃತಿ ಮತ್ತು ಕದೀಜತ್ ಮುನೀಶಾ ಕಾರ್ಯಕ್ರಮ ನಿರೂಪಿಸಿದರು.












