ಸುಳ್ಯ:ಕೆ.ವಿ.ಜಿ. ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಬೇಸಲ್ ಇಂಪ್ಲಾಟ್ ಕಾರ್ಯಾಗಾರ ಕೆ.ವಿ.ಜಿ ದಂತ ವೈದ್ಯಕೀಯ ಕಾಲೇಜಿನ ಪರಿದಂತ ವಿಭಾಗದಿಂದ ಜ 8ರಿಂದ 13ರ ತನಕ ಕಾಲೇಜಿನ ಸಭಾಂಗಣದಲ್ಲಿ “ರೆವಲ್ಯೂಷನರಿ ರೋಲ್ ಆಫ್ ಕಾರ್ಟಿಕೊ ಬೇಸಲ್ ಇಂಪ್ಲಾಟ್ಸ್ ಇನ್ ಪಾರ್ಷಲ್ ಆರ್ಚ್ ರಿಹೆಬಿಲಿಟೇಶನ್” ಎಂಬ ಕಾರ್ಯಗಾರವನ್ನು
ಆಯೋಜಿಸಲಾಗಿತ್ತು.ಸಂಪನ್ಮೂಲ ವ್ಯಕ್ತಿಯಾಗಿ ಖ್ಯಾತ ಇಂಪ್ಲಾಟಾಲಜಿಸ್ಟ್ ಡಾ. ಬಾಬಿ ಆ್ಯಂಟೋನಿಯವರು ತರಬೇತಿ ನೀಡಿದರು.
ಕೆ.ವಿ.ಜಿ ದಂತ ವೈದ್ಯಕೀಯ ಕಾಲೇಜಿನ ಸಿ.ಇ.ಓ ಡಾ. ಉಜ್ವಲ್ ಯು.ಜೆ ರವರು ಮುಖ್ಯ ಅತಿಥಿಗಳ ನೆಲೆಯಲ್ಲಿ ವಿಭಾಗದ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇಂಪ್ಲಾಟ್ ಚಿಕಿತ್ಸೆಯು ಹಲ್ಲುಗಳನ್ನು ಕಳೆದುಕೊಂಡವರಿಗೆ ವರದಾನವಾಗಬಲ್ಲದು ಎಂದು ಅಭಿಪ್ರಾಯಪಟ್ಟರು. ನೂತನವಾಗಿ ಅತ್ಯಾಧುನಿಕ ಸೌಲಭ್ಯವನ್ನೊಳಗೊಂಡ ಪ್ರತ್ಯೇಕ ಇಂಪ್ಲಾಟಾಲಜಿ ವಿಭಾಗವನ್ನು ಪ್ರಾರಂಭಿಸುವುದಾಗಿ ಘೋಷಿಸಿದರು.
ಪ್ರಾಂಶುಪಾಲರಾದ ಪ್ರೊ ಡಾ. ಮೋಕ್ಷಾ ನಾಯಕ್, ಡಾ. ಶರತ್ ಕುಮಾರ್ ಶೆಟ್ಟಿ, ಡಾ. ಪ್ರಸನ್ನ ಕುಮಾರ್, ಸಂದರ್ಭೋಚಿತವಾಗಿ ಮಾತಾನಾಡಿದರು.
ಪರಿದಂತ ವಿಭಾಗದ ಮುಖ್ಯಸ್ಧರಾದ ಡಾ.ಎಂ. ಎಂ ಎಂ.ದಯಾಕರ್ ಸ್ವಾಗತಿಸಿ, ಡಾ. ಪ್ರಕಾಶ್ ಪೈ ವಂದಿಸಿದರು. ಡಾ. ಸರ್ವಪ್ರದ ಮತ್ತು ಡಾ. ಚಿತ್ತಾರ ಕಾರ್ಯಕ್ರಮವನ್ನು ನಿರೂಪಿಸಿದರು.