ಸುಳ್ಯ:ಕೆ.ವಿ.ಜಿ ದಂತ ವೈದ್ಯಕೀಯ ಕಾಲೇಜಿನ, ಪರಿ ದಂತ ಚಿಕಿತ್ಸಾ ವಿಭಾಗದಿಂದ ದಿನಾಂಕ ಕಾಲೇಜಿನ ಸಭಾಂಗಣದಲ್ಲಿ “ಆಂಟಿ ಮೈಕ್ರೋಬಿಯಲ್ ಏಜೆಂಟ್ಸ್ ಕರೆಂಟ್ ಕಾನ್ಸೆಪ್ಟ್ಸ್ ಎಂಬ ಮುಂದುವರಿದ ದಂತ ಶಿಕ್ಷಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ವಸಡಿನ ಶಸ್ತ್ರ ಚಿಕಿತ್ಸಾ ವಿಭಾಗ ಮುಖ್ಯಸ್ಥರಾದ ಡಾ. ಎಂ.ಎಂ. ದಯಾಕರ್ ಸ್ವಾಗತಿಸಿದರು. ಅತಿಥಿಗಳು ದೀಪ ಬೆಳಗಿಸುವ ಮೂಲಕ
ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಡಾ. ಸಾತ್ವಿಕ್ ಜೈನ್ ಮುಖ್ಯ ವೈದ್ಯಾಧಿಕಾರಿಗಳು ಎಸ್.ಡಿ.ಯಂ. ಆಸ್ಪತ್ರೆ ಉಜಿರೆ ಮತ್ತು ಗೌರವ ಅತಿಥಿಗಳಾಗಿ ಡಾ. ಸುನಿಲ್ ಚಿಪ್ಲುನ್ಕರ್ ಗ್ರೂಪ್ ಪಾರ್ಮಸಿಟಿಕಲ್ಸ್ ಬೆಂಗಳೂರು, ಆಗಮಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಮೋಕ್ಷಾ ನಾಯಕ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಡಾ. ಶಿವಾನಂದ್ ಹೆಚ್. ಹಾಗೂ ಡಾ. ಪ್ರಭಿಷಾ ಅತಿಥಿಗಳನ್ನು ಪರಿಚಯಿಸಿದರು. ಡಾ. ಪ್ರಕಾಶ್ ಪೈ. ವಂದಿಸಿದರು. ಡಾ.ದಿಕ್ಷಾ ಕುಲಾಲ್ ಮತ್ತು ಡಾ. ಪೂಜಾ ಹೇಮಂತ್ ರವರು ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಎಲ್ಲಾ ಭೋದಕ ಸಿಬ್ಬಂದಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಇಂಟರ್ನ್ಸ್ ಭಾಗವಹಿಸಿದ್ದರು.









