ಸುಳ್ಯ:ಸುಳ್ಯದ ಕೆವಿಜಿ ದಂತ ಮಹಾವಿದ್ಯಾಲಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮತ್ತು ಕಾಲೇಜು ಡೇ ಆಚರಣೆ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಮುದಾಯ ಭವನದಲ್ಲಿ ನಡೆಯಿತು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾನಿಲಯದ ಉಪ ಕುಲಪತಿ ಡಾ.ಬಿ.ಸಿ.ಭಗವಾನ್ ಕಾರ್ಯಕ್ರಮವನ್ನು
ಉದ್ಘಾಟಿಸಿ ಪದವಿ ಪ್ರದಾನ ಮಾಡಿದರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ‘ಕಮಿಟಿ ಬಿ’ ಇದರ ಅಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ ಅಧ್ಯಕ್ಷತೆ ವಹಿಸಿದ್ದರು. ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯರು ಹಾಗೂ ಬೆಂಗಳೂರಿನ ರಾಜರಾಜೇಶ್ವರಿ ಡೆಂಟಲ್ ಕಾಲೇಜಿನ ಪ್ರೊಫೆಸರ್ ಡಾ.ಸುಮಾ ರಂಗನಾಥ್ ಮುಖ್ಯ ಅತಿಥಿಯಾಗಿದ್ದರು.

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ‘ಕಮಿಟಿ ಬಿ’ಯ ಕಾರ್ಯದರ್ಶಿ ಡಾ.ಜ್ಯೋತಿ ಆರ್.ಪ್ರಸಾದ್, ನಿರ್ದೇಶಕಿ ಡಾ.ಅಭಿಜ್ಞಾ ಆರ್.ಪ್ರಸಾದ್, ಕಾರ್ಯನಿರ್ವಾಹಕ ನಿರ್ದೇಶಕ ಮೌರ್ಯ.ಆರ್.ಪ್ರಸಾದ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಯು.ಜೆ ಅತಿಥಿಗಳಾಗಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಮೋಕ್ಷಾ ನಾಯಕ್ ಸ್ವಾಗತಿಸಿ, ವರದಿ ವಾಚಿಸಿದರು. ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ಶರತ್ ಕುಮಾರ್ ಶೆಟ್ಟಿ, ಡಾ.ಎಂ.ಎಂ.ದಯಾಕರ್, ಡಾ.ಜಯಪ್ರಸಾದ್ ಆನೆಕಾರ್, ಡಾ.ನುಸ್ರತ್ ಫರೀದ್, ಡಾ.ಸವಿತಾ ಸತ್ಯಪ್ರಸಾದ್, ಡಾ.ಕೃಷ್ಣಪ್ರಸಾದ್, ಡಾ.ಸುಹಾಸ್ ರಾವ್, ಡಾ.ಪ್ರಸನ್ನಕುಮಾರ್, ಡಾ.ಶೈಲಾ ಪೈ, ಕಾಲೇಜಿನ ಆಡಳಿತಾಧಿಕಾರಿ ಮಾಧವ.ಬಿ.ಟಿ. ವೇದಿಕೆಯಲ್ಲಿ, ಉಪಸ್ಥಿತರಿದ್ದರು. ಕ್ರೀಡೆ, ಕಲೆ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.














