ಸುಳ್ಯ:ವೈದ್ಯಕೀಯ ಪದವಿಯನ್ನು ಪಡೆದವರು ಕರ್ತವ್ಯವನ್ನು ನಿಷ್ಠೆಯಿಂದ ಮಾಡಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಭೋಜೇ ಗೌಡ ಹೇಳಿದರು. ಸುಳ್ಯದ ಜಾನಕಿ ವೆಂಕಟ್ರಮಣ ಗೌಡ ಸಭಾಂಗಣದಲ್ಲಿ ನಡೆದ ಕೆ.ವಿ.ಜಿ. ಡೆಂಟಲ್ ಕಾಲೇಜಿನ ಪದವಿ ಪ್ರದಾನ ಮತ್ತು ಕಾಲೇಜು ಡೇ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ
ಪದವಿ ಪ್ರದಾನ ಮಾಡಿ ಮಾತನಾಡಿದರು.ಸುಳ್ಯದಂತ ಗ್ರಾಮೀಣ ಪ್ರದೇಶದಲ್ಲಿ ಪ್ರಾಥಮಿಕ ದಿಂದ ಮೆಡಿಕಲ್ ಕಾಲೇಜು ತನಕದ ಶಿಕ್ಷಣ ಸಂಸ್ಥೆಗಳನ್ನು ಕುರುಂಜಿಯವರು ಸ್ಥಾಪಿಸಿರುವುದರಿಂದ ವಿದ್ಯಾವಂತರು, ವೈದ್ಯರು, ಇಂಜಿನಿಯರ್ಗಳು ಉಂಟಾಗಲು ಸಾಧ್ಯವಾಯಿತು ಎಂದರು.ಎ.ಒ.ಎಲ್.ಇ. ಕಮಿಟಿ ಬಿ ಚೆಯರ್ಮೆನ್ ಡಾ. ರೇಣುಕಾಪ್ರಸಾದ್ ಕೆ.ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವರು ಪದಕ ಮತ್ತು ಪ್ರಮಾಣ ಪತ್ರ ವಿತರಿಸಿದರು.

ಕೆ.ವಿ.ಜಿ. ಡೆಂಟಲ್ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ ಸ್ವಾಗತಿಸಿ,ಪ್ರಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲೆ ಡಾ. ಮೋಕ್ಷಾ ನಾಯಕ್ ಕಾಲೇಜಿನ ವರದಿ ವಾಚಿಸಿದರು.ಎ.ಒ.ಎಲ್.ಇ. ಕಮಿಟಿ ಬಿ ಕಾರ್ಯದರ್ಶಿ ಡಾ. ಜ್ಯೋತಿ ಆರ್. ಪ್ರಸಾದ್ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಎ.ಒ.ಎಲ್. ಇ. ಕಮಿಟಿ ಬಿ ನಿರ್ದೇಶಕ ಮೌರ್ಯ ಆರ್. ಪ್ರಸಾದ್ ಕ್ರೀಡಾ ಸಾಧಕರನ್ನು ಪ್ರಮಾಣ ಪತ್ರ ನೀಡಿ ಗೌರವಿಸಿದರು. ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ಜಾಕೆ ಮಾಧವ ಗೌಡ ಕಾಲೇಜಿನ ಮ್ಯಾಗಜೀನ್ ಬಿಡುಗಡೆಗೊಳಿಸಿದರು, ಎನ್.ಎ. ರಾಮಚಂದ್ರ ಬ್ಯಾಚ್ ಮ್ಯಾಗಜೀನ್ ಬಿಡುಗಡೆಗೊಳಿಸಿದರು.
ಡಾ. ಶೈಲಾ ಎಂ. ಆಡಳಿತಾತ್ಮಕ ಪ್ರಮಾಣ ವಚನ ಬೋಧಿಸಿದರು. ಡಾ.ಎಂ.ಎಂ. ದಯಾಕರ್ ಎಸ್.ಎಲ್. ಭೋಜೇ ಗೌಡರನ್ನು ಸಭೆಗೆ ಪರಿಚಯಿಸಿದರು.ಫಾತಿಮತ್ ಶಿಧಾ ಮತ್ತು ಆದರ್ಶ್ ಪದವಿ ಪಡೆದ ವಿದ್ಯಾರ್ಥಿಗಳ ಪರವಾಗಿ ಅನಿಸಿಕೆ ವ್ಯಕ್ತಪಡಿಸಿದರು. ಡಾ. ಮನೋಜ್ ಅಡ್ಡಂತಡ್ಕ ವಂದಿಸಿದರು.ಕಾಲೇಜಿನ ಪಿಜಿ ಡೈರೆಕ್ಟರ್ ಮತ್ತು ವಿಭಾಗ ಮುಖ್ಯಸ್ಥರಾದ ಡಾ. ಶರತ್ ಕುಮಾರ್ ಶೆಟ್ಟಿ, ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ. ಸವಿತಾ ಸತ್ಯಪ್ರಸಾದ್, ಡಾ. ಕೃಷ್ಣಪ್ರಸಾದ್, ಡಾ. ದಯಾಕರ್, ಡಾ. ನುಶ್ರತ್ ಫರೀದ್, ಡಾ. ಸುಹಾಸ್ ರಾವ್, ಡಾ. ಪ್ರಸನ್ನ ಕುಮಾರ್, ಡಾ. ಜಯಲಕ್ಷ್ಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಕಾಲೇಜು ಡೇ ಅಂಗವಾಗಿ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆಯಿತು.














