ಸುಳ್ಯ:ಕೆವಿಜಿ ವಿದ್ಯಾ ಸಂಸ್ಥೆಗಳ ಸ್ಥಾಪಕರಾದ ಡಾ.ಕುರುಂಜಿ ವೆಂಕಟ್ರಮಣ ಗೌಡರ 97ನೇ ಜನ್ಮದಿನಾಚರಣೆ ಪ್ರಯುಕ್ತ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ವತಿಯಿಂದ ಕೆವಿಜಿ ಕ್ಯಾಂಪಸ್ನ ಡಾ.ಕುರುಂಜಿಯವರ ಪುತ್ಥಳಿಗೆ ಹಾರಾರ್ಪಣೆ ಹಾಗೂ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಲಾಯಿತು.ಎಒಎಲ್ಇ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅವರು ಪುತ್ಥಳಿಗೆ ಮಾಲಾರ್ಪಣೆ ಮಾಡಿ

ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿ, ಸಂಸ್ಮರಣಾ ನುಡಿಗಳನ್ನಾಡಿದರು. ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಕೆವಿಜಿ ಅವರ ಸಂಸ್ಮರಣಾ ಭಾಷಣ ಮಾಡಿದರು.
ಎಒಎಲ್ಇ ಉಪಾಧ್ಯಕ್ಷೆ ಶೋಭಾ ಚಿದಾನಂದ, ಪ್ರಧಾನ ಕಾರ್ಯದರ್ಶಿ ಅಕ್ಷಯ್.ಕೆ.ಸಿ, ಕಾರ್ಯದರ್ಶಿಗಳಾದ ಡಾ.ಐಶ್ವರ್ಯ, ಕೆ.ವಿ.ಹೇಮನಾಥ್, ಕೋಶಾಧಿಕಾರಿ ಡಾ.ಗೌತಂ ಗೌಡ ಎ.ಜಿ, ಎಒಎಲ್ಇ ನಿರ್ದೇಶಕರಾದ

ಜಗದೀಶ್ ಅಡ್ತಲೆ, ಮೀನಾಕ್ಷಿ ಹೇಮನಾಥ್, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ,ಪ್ರಮುಖರಾದ ಡಾ.ಡಿ.ವಿ.ಲೀಲಾಧರ್, ಡಾ.ಎನ್.ಎ.ಜ್ಞಾನೇಶ್, ಪ್ರೊ. ದಾಮೋದರ ಗೌಡ, ಪ್ರೊ.ಎಂ.ಬಾಲಚಂದ್ರ ಗೌಡ, ನೀಲಾಂಬಿಕೈ ನಟರಾಜನ್, ಚಂದ್ರಶೇಖರ ಪೇರಾಲು, ಪಿ.ಸಿ.ಜಯರಾಮ, ಎಂ.ವೆಂಕಪ್ಪ ಗೌಡ, ಕೆ.ಟಿ.ವಿಶ್ವನಾಥ್, ಡಾ.ಸಂದೇಶ್, ರುದ್ರಕುಮಾರ್ ಎಂ.ಎಂ., ಮಿಥಾಲಿ ರೈ,ಡಾ.ಶೀಲಾ ಜಿ ನಾಯಕ್, ರಾಜು ಪಂಡಿತ್, ಸತೀಶ್ ಕೆ.ಜಿ, ಎಂ.ರಂಗನಾಥ್, ಸುಪ್ರೀತ್ ಮೋಂಟಡ್ಕ, ಜನಾರ್ಧನ ನಾಯ್ಕ್, ಕೆ.ಎಸ್.ಗೋಪಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು. ಉಪನ್ಯಾಸಕಿ ಬೇಬಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.
















