ಸುಳ್ಯ:ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದ ಕುರುಂಜಿಯವರ 95ನೇ ಹುಟ್ಟು ಹಬ್ಬದ ಪ್ರಯುಕ್ತ ಸಂಘದ ಕಚೇರಿಯಲ್ಲಿ ಡಾ. ಕುರುಂಜಿ ವೆಂಕಟ್ರಮಣ ಗೌಡರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷರಾದ ಡಾ. ಚಿದಾನಂದ ಕೆ.ವಿ ಅವರು ಪುಷ್ಪಾರ್ಚನೆ ನೆರವೆರಿಸಿದರು. ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಪೇರಾಲ್ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ
ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್, ಡಾ ಲೀಲಾಧರ್, ಪೂರ್ವಾಧ್ಯಕ್ಷರಾದ ದಿನೇಶ್ ಮಡಪ್ಪಾಡಿ, ಶೈಲೇಶ್ ಅಂಬೆಕಲ್, ದೊಡ್ಡಣ್ಣ ಬರೆಮೆಲು ಪ್ರಮುಖರಾದ
ಎಸಿ ವಸಂತ್, ಶರತ್ ಅಡ್ಕಾರ್, ಎಸ್.ಸಂಶುದ್ದೀನ್, ಸ್ಟುಡಿಯೊ ಗೊಪಾಲ್ ,ಮಾಧವ ಮಾಸ್ತರ್, ಕಮಲಾಕ್ಷಿ ರೈ, ಹರೀಶ್ ಬಂಟ್ವಾಳ್,ಜಗದೀಶ್ ಎ ಎಚ್, ಡಾ. ಜ್ಞಾನೇಶ್ ಎನ್. ಎ, ವಿಟ್ಟಲ ಗೌಡ, ಅನಂದ ಖಂಡಿಗ, ಗಂಗಾಧರ ಮಟ್ಟಿ, ಪ್ರಭಾಕರನ್ ನಾಯರ್ ಸಿ.ಎಚ್, ಕೆ.ಬಿ.ಇಬ್ರಾಹಿಂ ಗಾಂಧಿನಗರ, ಸಂಘದ ಕಾರ್ಯದರ್ಶಿ ದಿನೇಶ್ ಅಂಬೆಕಲ್, ಕೊಶಾಧಿಕಾರಿ ಜನಾರ್ದನ್ ನಾಯ್ಕ್ ಇವರು ಉಪಸ್ತಿತರಿದ್ದರು. ಕಾರ್ಯದರ್ಶಿ ದಿನೇಶ್ ಅಂಬೆಕಲ್ ವಂದಿಸಿದರು.










