ಸುಳ್ಯ:ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇದರ ವಿದ್ಯಾರ್ಥಿ ಸಂಘದ ರಚನೆ ಮತ್ತು ಪ್ರತಿಜ್ಞಾ ವಿಧಿ ಸ್ವೀಕಾರ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬಿಳ್ಕೊಡಿಗೆ ಸಮಾರಂಭ ಕಾಲೇಜಿನ ಧನ್ವಂತರಿ ಸಭಾಂಗಣದಲ್ಲಿ ನಡೆಯಿತು ಕಾರ್ಯಕ್ರಮವನ್ನು
ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಅಧ್ಯಕ್ಷರಾದ ಡಾ. ಕೆ ವಿ ಚಿದಾನಂದ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ.ಎಂ., ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ.ವಿ.ಶುಭ ಹಾರೈಸಿದರು. ನೂತನ ವಿದ್ಯಾರ್ಥಿ ಕ್ಷೇಮಾಭಿವೃಧಿ ಅಧಿಕಾರಿ ಡಾ. ವಿನಯ್ ಶಂಕರ್ ಭಾರಧ್ವಾಜ್ ಬಿ. ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ನೂತನ ಸ್ನಾತಕೋತ್ತರ ನಾಯಕಿಯಾಗಿ ಡಾ. ಅನುಷಾ ಮಡಪ್ಪಾಡಿ,
ಪದವಿ ವಿದ್ಯಾರ್ಥಿ ನಾಯಕಿಯಾಗಿ ನೀಲಾ ಮಹಾಂತಪ್ಪ ಎ., ವಿದ್ಯಾರ್ಥಿನಿ ಪ್ರತಿನಿಧಿಯಾಗಿ ಚೇತನಾ ಎಂ., ಪ್ರಧಾನ ಕಾರ್ಯದರ್ಶಿಯಾಗಿ ಸಂಪತ್ ಹಿರೇಮಠ್, ಕಾರ್ಯದರ್ಶಿಯಾಗಿ ದಾಂಡ್ರೆ ಶಾಕ್ಷಿ,ಫಾತಿಮಾತ್ ತಮೀಜಾ, ಖಜಾಂಜಿಯಾಗಿ ವಿಶ್ವಾಸ್ ಗೌಡ ಹಾಗೂ 46 ವಿವಿಧ ಕಮೀಟಿಗಳ ಸದಸ್ಯರನ್ನೊಳಗೊಂಡ ವಿದ್ಯಾರ್ಥಿ ಸಂಘವನ್ನು ರಚನೆ ಮಾಡಲಾಯಿತು.
ವೇದಿಕೆಯಲ್ಲಿ ಕಾಲೇಜಿನ ಅಕಾಡೆಮಿಕ್ ಕೋ-ಆರ್ಡಿನೇಟರ್ ಡಾ. ಕವಿತಾ ಬಿ. ಎಂ., ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ವಿನಯ್ ಶಂಕರ್ ಭಾರಧ್ವಾಜ್ ಬಿ. ಉಪಸ್ಥಿತರಿದ್ದರು. ಕಾಲೇಜಿನ ನಿರ್ಗಮಿತ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ಹರ್ಷಿತಾ ಯಂ., ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಸಂಪತ್ ಹಿರೇಮಠ್ ವಂದಿಸಿದರು.ವಿದ್ಯಾರ್ಥಿಗಳಾದಚಿನ್ಮಯಿ ಮತ್ತು ತಂಡದವರು ಪ್ರಾರ್ಥಿಸಿ,
ವಿದ್ಯಾರ್ಥಿಗಳಾದ ಚಿಂತನ ಹಾಗೂ ಆಯಿಷತ್ ರುಶ್ದ ಕಾರ್ಯಕ್ರಮ ನಿರೂಪಿಸಿದರು.





