ಸುಳ್ಯ: ವಿಶ್ವ ಅಂಗದಾನ ದಿನಾಚರಣೆಯ ಅಂಗದಾನದ ಜಾಗೃತಿ ಮೂಡಿಸುವ ಸಲುವಾಗಿ ಕೆ ವಿ ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ರಚನಾ ಶಾರೀರ ವಿಭಾಗ ಮತ್ತು, ಎನ್.ಎಂ.ಸಿ ಕಾಲೇಜಿನ ಐ.ಕ್ಯೂ.ಏ.ಸಿ ವಿಭಾಗ ಹಾಗೂ ಎನ್. ಎಂ.ಸಿ. ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಮಿತಿಯ ಸಹಭಾಗಿತ್ವದಲ್ಲಿ
ಬೀದಿ ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ನ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ ಸಿ, ಎನ್ ಎಂ ಸಿಯ ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ.ಎಂ., ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ರತ್ನಾವತಿ ಡಿ, ಎನ್ಎಂಸಿ ಕಾಲೇಜಿನ ಐಕ್ಯುಏಸಿ ವಿಭಾಗದ ಸಂಯೋಜಕಿ ಡಾ.ಮಮತಾ ,
ಎನ್ಎಂ ಪಿಯುಸಿ ಪ್ರಾಂಶುಪಾಲೆ ಮಿಥಾಲಿ ಪಿ.ರೈ,
ಕೆ ವಿ ಜಿ ಆಯುರ್ವೇದ ಕಾಲೇಜಿನ ರಚನಾ ಶಾರೀರ ವಿಭಾಗದ ಮುಖ್ಯಸ್ಥ ಡಾ. ವಿನಯ್ ಶಂಕರ್ ಭಾರಧ್ವಾಜ್, ಎನ್ ಎಂ ಸಿ, ಎನ್ ಎಂ ಪಿಯುಸಿ ಹಾಗೂ ಕೆ ವಿ ಜಿ ಆಯುರ್ವೇದ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
ಕೆ ವಿ ಜಿ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳಾದ ನೀಲಿಮಾ ಮತ್ತು ಬಳಗ ಪ್ರಾರ್ಥಿಸಿ, ಮಾನ್ಯ ಅಂಬೆಕಲ್ಲು ನಿರೂಪಿಸಿ,
ಧ್ಯಾನ ವಿಜಯ್ ಸ್ವಾಗತಿಸಿ ವಂದಿಸಿದರು.





