ಸುಳ್ಯ: ಮಕ್ಕಳಿಗೆ ಸಾಂಪ್ರದಾಯಿಕ ವಿಚಾರಗಳನ್ನು ತಿಳಿಡಬೇಕೆಂಬ ದೃಷ್ಠಿಯಿಂದ ಅಮರ ಜ್ಯೋತಿ ಪಿಯು ಕಾಲೇಜಿನಲ್ಲಿ ಆಟಿ ಉತ್ಸವವನ್ನು ಆಚರಿಸಲಾಯಿತು.ಆಟಿ ಉತ್ಸವದ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳಿಗೆ ಪಾಡ್ದನ ಹಾಡುಗಾರಿಕೆ,ನೃತ್ಯ ಮತ್ತು
ಸಾಂಪ್ರದಾಯಿಕ ಎಜೆ ಪಾಕಶಾಲಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ದೀಪ ಬೆಳಗಿಸಿ ತುಳು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.ನೃತ್ಯ ಮತ್ತು ಹಾಡು ಸ್ಪರ್ಧೆಗಳಿಗೆ ನೀಲವೇಣಿ ಮತ್ತು ಲಕ್ಷ್ಮಿ ಲಾವಣ್ಯ( ಐಪಿಎಸ್ ನ ಶಿಕ್ಷಕರು) ತೀರ್ಪುಗಾರರಾಗಿ ಆಗಮಿಸಿದ್ದರು. ಎ ಜೆ ಪಾಕಶಾಲೆಯ ತೀರ್ಪುಗಾರರಾಗಿ ಕೆವಿಜಿ ಅಮರಜ್ಯೋತಿಯ ಗವರ್ನಿಂಗ್ ಕೌನ್ಸಿಲ್ ಸದಸ್ಯರಾದ ಸೂರಯ್ಯ ಸುಂತೋಡು ಹಾಗೂ ಸುಜಾತ ಹರೀಶ್ ಕಾಮತ್ ಆಗಮಿಸಿದ್ದರು. ವಿದ್ಯಾರ್ಥಿನಿ ರಿತಿ ಆಳ್ವ ಸ್ವಾಗತಿಸಿ, ಸೃಷ್ಟಿ ವಂದಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಯಶೋದಾ ರಾಮಚಂದ್ರ ಹಾಗೂ ಉಪ ಪ್ರಾಂಶುಪಾಲರಾದ ದೀಪಕ್ ವೈ ಆರ್ ಹಾಗೂ ಕಾಲೇಜಿನ ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು.