ಸುಳ್ಯ:ಅಮರಜ್ಯೋತಿ ಪಿಯು ಕಾಲೇಜಿನಲ್ಲಿ ಸಂಪಾದಿತ ಕೃತಿ ‘ಮೇರಿ ಮನ್ ಕಿ ಬಾತ್’ ಸಂಪಾದಕಿ ಸುಸ್ಮಿತಾ ಜಾಕೆ ಅವರ ಸಂಪಾದಕಿ ಕೃತಿ ಪುಸ್ತಕ ಬಿಡುಗಡೆಯನ್ನು ಕಾಲೇಜಿನ ಟ್ರಸ್ಟಿ ಅಭಿಜ್ಞಾ ಆರ್ ಪ್ರಸಾದ್ ಬಿಡುಗಡೆ ಮಾಡಿದರು.ಇಂದಿನ ಎಐ ಯುಗದಲ್ಲಿ
ಪುಸ್ತಕ ಮಕ್ಕಳ ಭಾವನಾತ್ಮಕ ಮತ್ತು ಸೃಜನಶೀಲತೆಯ ಪ್ರತೀಕವಾಗಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಟ್ರಸ್ಟಿ ಡಾ.ಜ್ಯೋತಿ ಆರ್ ಪ್ರಸಾದ್, ಮೌರ್ಯ ಆರ್ ಪ್ರಸಾದ್ ಹಾಗೂ ಆಡಳಿತಧಿಕಾರಿ ಭವಾನಿಶಂಕರ ಅಡ್ತಲೆ,ಪ್ರಾಂಶುಪಾಲರಾದ ಡಾ. ಯಶೋದಾ ರಾಮಚಂದ್ರ, ಉಪ ಪ್ರಾಂಶುಪಾಲರಾದ ದೀಪಕ್ ವೈ ಆರ್ ಹಾಗೂ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.





