ಸುಳ್ಯ:ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಲೋಕೇಶ್ ಪೆರ್ಲಂಪಾಡಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಗಿರೀಶ್ ಅಡ್ಪಂಗಾಯ, ಕೋಶಾಧಿಕಾರಿಯಾಗಿ ಪುಷ್ಪರಾಜ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಜು.29 ರಂದು ಪ್ರೆಸ್ ಕ್ಲಬ್ನಲ್ಲಿ ನಡೆದ ಕಾರ್ಯನಿರತ ಪತ್ರಕರ್ತರ ಸಂಘದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ
ಲೋಕೇಶ್ ಪೆರ್ಲಂಪಾಡಿ, ಗಿರೀಶ್ ಅಡ್ಪಂಗಾಯ, ಪುಷ್ಪರಾಜ್ ಶೆಟ್ಟಿ
ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ದಯಾನಂದ ಕಲ್ನಾರ್, ಉಪಾಧ್ಯಕ್ಷರಾಗಿ ಪ್ರಜ್ಞಾ ಎಸ್.ನಾರಾಯಣ, ಜೊತೆ ಕಾರ್ಯದರ್ಶಿಯಾಗಿ ಶಿವಪ್ರಸಾದ್ ಕೇರ್ಪಳ, ನಿರ್ದೇಶಕರಾಗಿ ತೇಜೇಶ್ವರ ಕುಂದಲ್ಪಾಡಿ, ಪದ್ಮನಾಭ ಮುಂಡೋಕಜೆ, ಜಯದೀಪ್ ಕುದ್ಕುಳಿ, ಮಿಥುನ್ ಕರ್ಲಪಾಡಿ, ಪದ್ಮನಾಭ ಅರಂಬೂರು, ಮುರಳೀಧರ ಅಡ್ಡನಪಾರೆ.
ಗೌರವ ಸಲಹೆಗಾರರಾಗಿ ಗಂಗಾಧರ ಮಟ್ಟಿ, ದುರ್ಗಾಕುಮಾರ್ ನಾಯರ್ಕೆರೆ, ಗಂಗಾಧರ ಕಲ್ಲಪಳ್ಳಿ, ಜೆ.ಕೆ.ರೈ, ಗಿರೀಶ್ ಪೆರುಮುಂಡ, ದಯಾನಂದ ಕೊರತ್ತೋಡಿ, ಕೃಷ್ಣ ಬೆಟ್ಟ, ಆಂತರಿಕ ಲೆಕ್ಕ ಪರಿಶೋಧರಾಗಿ ಜಯಪ್ರಕಾಶ್ ಕುಕ್ಕೇಟ್ಟಿ ಆಯ್ಕೆಯಾದರು.
ಕಾರ್ಯನಿರತ ಪತ್ರಕರ್ತರ ಅಧ್ಯಕ್ಷ ದಯಾನಂದ ಕಲ್ನಾರ್ ಅಧ್ಯಕ್ಷತೆ ವಹಿಸಿದ್ದರು.