ಸುಳ್ಯ::ಸುಳ್ಯ ತಾಲೂಕು ಕಾರ್ಯನಿತ ಪತ್ರಕರ್ತರ ಸಂಘಕ್ಕೆ 25 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಜುಲೈ 19 ರಂದು ಬೆಳ್ಳಿ ಹಬ್ಬ ಕಾರ್ಯಕ್ರಮ ಆಚರಿಸಲು ನಿರ್ಧರಿಸಲಾಗಿದೆ. ಬೆಳ್ಳಿ ಹಬ್ಬ ಕಾರ್ಯಕ್ರಮದ ಅಂಗವಾಗಿ ಜು.19 ರಂದು ಮಾಧ್ಯಮ ವಿಚಾರ ಸಂಕಿರಣ, ಸುಳ್ಯ ಮೂಲದ ಪತ್ರಕರ್ತರ ಸಮ್ಮಿಲನ, ಮಾಜಿ ಅಧ್ಯಕ್ಷರುಗಳಿಗೆ ಸನ್ಮಾನ , ಸಾಂಸ್ಕೃತಿಕ ಕಾರ್ಯಕ್ರಮ ಸಹಿತ ದಿನ ಪೂರ್ತಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು, ವಿವಿಧ ಕ್ಷೇತ್ರಗಳ ಗಣ್ಯರು
ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಳ್ಳಿ ಹಬ್ಬ ಕಾರ್ಯದಕ್ರಮದ ಯಶಸ್ವಿಗಾಗಿ ಸಮಿತಿಯನ್ನು ರಚಿಸಲಾಗಿದೆ.
ಬೆಳ್ಳಿ ಹಬ್ಬ ಸಮಿತಿ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಗಂಗಾಧರ ಮಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ದುರ್ಗಾಕುಮಾರ್ ನಾಯರ್ ಕೆರೆ ಆಯ್ಕೆಗೊಂಡಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ದಯಾನಂದ ಕೊರತ್ತೋಡಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಕೇರ್ಪಳ, ಖಜಾಂಜಿ ದಯಾನಂದ ಕಲ್ನಾರ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬೆಳ್ಳಿ ಹಬ್ಬ ಆಚರಣಾ ಸಮಿತಿ: ಅಧ್ಯಕ್ಷ – ಗಂಗಾಧರ ಮಟ್ಟಿ, ಕಾರ್ಯದರ್ಶಿ – ದುರ್ಗಾಕುಮಾರ್ ನಾಯರ್ ಕೆರೆ, ಕೋಶಾಧಿಕಾರಿ – ಗಿರೀಶ್ ಅಡ್ಪಂಗಾಯ.
ಕಾರ್ಯಕ್ರಮ ಸಂಯೋಜನಾ ಸಮಿತಿಗೆ ಸಂಚಾಲಕರಾಗಿ ಗಂಗಾಧರ ಕಲ್ಲಪಳ್ಳಿ, ಸಹ ಸಂಚಾಲಕರಾಗಿ ದಯಾನಂದ ಕಲ್ನಾರ್, ಆಹಾರ ಸಮಿತಿಯ ಸಂಚಾಲಕರಾಗಿ ಜಯಪ್ರಕಾಶ್ ಕುಕ್ಕೆಟ್ಟಿ, ಸಹ ಸಂಚಾಲಕರಾಗಿ ಮುರಳೀಧರ ಅಡ್ಡನಪಾರೆ, ಆರ್ಥಿಕ ಸಮಿತಿಯ ಸಂಚಾಲಕರಾಗಿ ಕೃಷ್ಣ ಬೆಟ್ಟ, ಸಹ ಸಂಚಾಲಕರಾಗಿ ಜೆ.ಕೆ.ರೈ, ವೇದಿಕೆ, ಅಲಂಕಾರ, ಧ್ವನಿ ಸಮಿತಿಯ ಸಂಚಾಲಕರಾಗಿ ಲೋಕೇಶ್ ಪೆರ್ಲಂಪಾಡಿ, ಸಹ ಸಂಚಾಲಕರಾಗಿ ಪುಷ್ಪರಾಜ್ ಶೆಟ್ಟಿ, ಸಾಂಸ್ಕೃತಿಕ ಸಮಿತಿ ಸಂಚಾಲಕರಾಗಿ ಗಣೇಶ್ ಮಾವಂಜಿ, ಸಹ ಸಂಚಾಲಕರಾಗಿ ಪದ್ಮನಾಭ ಅರಂಬೂರು, ಸನ್ಮಾನ ಸಮಿತಿಯ ಸಂಚಾಲಕರಾಗಿ ಹಸೈನಾರ್ ಜಯನಗರ, ಸಹ ಸಂಚಾಲಕರಾಗಿ ಪದ್ಮನಾಭ ಮುಂಡೋಕಜೆ, ಪ್ರಚಾರ ಸಮಿತಿ ಸಂಚಾಲಕರಾಗಿ ಸತೀಶ್ ಹೊದ್ದೆಟ್ಟಿ , ಸಹ ಸಂಚಾಲಕರಾಗಿ ಜಯದೀಪ್ ಕುದ್ಕುಳಿ, ಆತಿಥ್ಯ ಸಮಿತಿಯ ಸಂಚಾಲಕರಾಗಿ ಪ್ರಜ್ಞಾ ಎಸ್. ನಾರಾಯಣ್, ಸ್ವಯಂಸೇವಾ ಸಮಿತಿ ಸಂಚಾಲಕರಾಗಿ ಸುದೀಪ್ ಕೋಟೆಮಲೆ, ಸಹ ಸಂಚಾಲಕರಾಗಿ ತೇಜೇಶ್ವರ ಕುಂದಲ್ಪಾಡಿ ಯವರನ್ನು ಆಯ್ಕೆಮಾಡಲಾಯಿತು.