ಸುಳ್ಯ:ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ಡಿ.28ರಂದು ನಡೆಯಲಿದೆ.
ಅಧ್ಯಕ್ಷ, ಹಾಗೂ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು
7 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಅಧ್ಯಕ್ಷ ಸ್ಥಾನಕ್ಕೆ

ಲೋಕೇಶ್ ಪೆರ್ಲಂಪಾಡಿ, ಕೃಷ್ಣ ಬೆಟ್ಟ, ದಯಾನಂದ ಕಲ್ನಾರ್, ದಯಾನಂದ ಕೊರತ್ತೋಡಿ
ಲೋಕೇಶ್ ಪೆರ್ಲಂಪಾಡಿ ಹಾಗೂ ಕೃಷ್ಣ ಬೆಟ್ಟ ಮಧ್ಯೆ ಸ್ಪರ್ಧೆ ನಡೆಯಲಿದೆ. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ದಯಾನಂದ ಕಲ್ನಾರ್ ಹಾಗೂ ದಯಾನಂದ ಕೊರತ್ತೋಡಿ ಕಣದಲ್ಲಿದ್ದಾರೆ. 7 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ತೇಜೇಶ್ವರ ಕುಂದಲ್ಪಾಡಿ, ಕಾರ್ಯದರ್ಶಿಯಾಗಿ ಪದ್ಮನಾಭ ಮುಂಡೋಕಜೆ, ಕೋಶಾಧಿಕಾರಿಯಾಗಿ ಜಯಪ್ರಕಾಶ್ ಕುಕ್ಕೇಟ್ಟಿ ಅವಿರೋಧವಾಗಿ ಆಯ್ಕೆಯಾದರೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಗಂಗಾಧರ ಮಟ್ಟಿ, ಗಂಗಾಧರ ಕಲ್ಲಪಳ್ಳಿ, ಗಿರೀಶ್ ಅಡ್ಪಂಗಾಯ, ಶಿವಪ್ರಸಾದ್ ಕೇರ್ಪಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಡಿ.28ರಂದು ಪೂ.9ರಿಂದ ಮಧ್ಯಾಹ್ನ 1ಗಂಟೆಯ ತನಕ ಮತದಾನ ನಡೆಯಲಿದೆ. ಮಧ್ಯಾಹ್ನ 2ರಿಂದ ಮತ ಎಣಿಕೆ ಕಾರ್ಯ ನಡೆಯಲಿದೆ.
















