ಮಡಿಕೇರಿ: ಕೂಡಿಗೆ ಕ್ರೀಡಾಶಾಲೆಯಲ್ಲಿ 36 ವರ್ಷಗಳ ಸುಧೀಘ೯ ಸೇವೆ ಸಲ್ಲಿಸಿದ್ದ ಕುಂತಿಬೋಪಯ್ಯ ಅವರ ಕುರಿತು ಹಿರಿಯ ಪತ್ರಕರ್ತ ಅನಿಲ್ ಎಚ್.ಟಿ.ನಿರ್ದೇಶಿಸಿದ ಕುಂತಿಬೋಪಯ್ಯ ಸಾಕ್ಷ್ಯಚಿತ್ರವನ್ನು ಲೋಕಾರ್ಪಣೆ ಮಾಡಲಾಯಿತು. ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಚಿಂತಕ, ವೈದ್ಯ ಡಾ.ಎಂ.ಜಿ.ಪಾಟ್ಕರ್ ಲೋಕಾರ್ಪಣೆ ಮಾಡಿದರು. ಭಾರತೀಯ ವಿದ್ಯಾಭವನ ಕೊಡಗು
ಕೇಂದ್ರದ ಅಧ್ಯಕ್ಷ ಕೆ.ಎಸ್.ದೇವಯ್ಯ ಮಾತನಾಡಿ, ಕೂಡಿಗೆ ಕ್ರೀಡಾಶಾಲೆಯಲ್ಲಿ ಮಹತ್ತರ ಸಾಧನೆ ಮಾಡಿ ಶಾಲೆಯ ಉನ್ನತಿಗೆ ಅವಿರತ ಶ್ರಮಿಸಿದ ಕುಂತಿ ಬೋಪಯ್ಯ ಅವರ ಕುರಿತ ಸಾಕ್ಷ್ಯ ಚಿತ್ರ ಖಂಡಿತವಾಗಿಯೂ ಸಮಾಜಕ್ಕೆ ಅಗತ್ಯವಾಗಿತ್ತು ಎಂದು ಹೇಳಿದರು. ಕೂಡಿಗೆ ಕ್ರೀಡಾಶಾಲೆಯಲ್ಲಿ ಶಿಕ್ಷಕಿ, ಪ್ರಾಂಶುಪಾಲೆಯಾಗಿ ನಿವೖತ್ತಿಯಾದ ಕುಂತಿಬೋಪಯ್ಯ ಮಾತನಾಡಿದರು.
ಕುಂತಿಟೀಚರ್ ಸಾಕ್ಷ್ಯ ಚಿತ್ರ ನಿದೇ೯ಶಕ ಪತ್ರಕತ೯ ಅನಿಲ್ ಎಚ್.ಟಿ. ಮಾತನಾಡಿ. ತನ್ನ ಪಾಡಿಗೆ ತಾವು 36 ವಷ೯ಗಳ ಕಾಲ ಕ್ರೀಡಾಶಾಲೆಯಲ್ಲಿ ಕತ೯ವ್ಯ ನಿವ೯ಹಿಸಿ ಆ ಶಾಲೆಯ ಏಳಿಗೆಗೆ ಶ್ರಮಿಸಿದ ಕುಂತಿ ಅವರ ಸಾಧನೆ ಜತೆಗೇ ರಾಜ್ಯದ ಸುಸಜ್ಜಿತ ಕ್ರೀಡಾಶಾಲೆಯ ಬಗ್ಗೆ ಸಾಕ್ಷ್ಯ ಚಿತ್ರದಲ್ಲಿ ಮಾಹಿತಿ ನೀಡಲಾಗಿದೆ. ಕೊಡಗಿಗೆ ಕೂಡಿಗೆ ಕ್ರೀಡಾಶಾಲೆ ಖಂಡಿತವಾಗಿಯೂ ಪ್ರತಿಷ್ಟೆಯ ಶಾಲೆಯಾಗಿದೆ. ಹೀಗಾಗಿ ಸಾಕ್ಷ್ಯ ಚಿತ್ರದಲ್ಲಿ ಕೂಡಿಗೆ ಕ್ರೀಡಾಶಾಲೆಯ ಬೆಳವಣಿಗೆಯನ್ನೂ ದಾಖಲಿಸಲಾಗಿದೆ ಎಂದರು. ಓವ೯ ಆದಶ೯ ಶಿಕ್ಷಕಿಯ ಬಗ್ಗೆ ಸಾಕ್ಷ್ಯ ಚಿತ್ರದ ಮೂಲಕ ಬೆಳಕು ಚೆಲ್ಲುವ ಪ್ರಯತ್ನ ಕುಂತಿಟೀಚರ್ ಸಾಕ್ಷ್ಯ ಚಿತ್ರದ ಮೂಲಕ ಆಗಿದೆ ಎಂದೂ ಅನಿಲ್ ಹೇಳಿದರು.
ಮಡಿಕೇರಿ ನಗರಸಭೆಯ ಅಧ್ಯಕ್ಷೆ ಅನಿತಾ ಪೂವಯ್ಯ, ವಿರಾಜಪೇಟೆಯ ಸಮಾಜಸೇವಕಿ ಕಾಂತಿ ಸತೀಶ್ ಮಾತನಾಡಿ, ಕೂಡಿಗೆ ಕ್ರೀಡಾಶಾಲೆಯ ಪ್ರಾಂಶುಪಾಲ ದೇವಕುಮಾರ್,ಕ್ರೀಡಾಇಲಾಖೆಯ ತರಬೇತುದಾರ ಅಂತೋಣಿ ಡಿಸೋಜಾ ಮಾತನಾಡಿದರು.
ಸಾಕ್ಷ್ಯಚಿತ್ರ ನಿರ್ಮಿಸಿ, ನಿದೇ೯ಶಿಸಿದ ಹಿರಿಯ ಪತ್ರಕತ೯ ಅನಿಲ್ ಎಚ್.ಟಿ. ಅವರನ್ನು ಈ ಸಂದಭ೯ ಸನ್ಮಾನಿಸಿ ಗೌರವಿಸಲಾಯಿತು.
ಉಪನ್ಯಾಸಕಿ ಕೆ.ಜಯಲಕ್ಷ್ಮಿ ಕಾರ್ಯಕ್ರಮದಲ್ಲಿ ನಿರೂಪಿಸಿದರು.ಅಶ್ವಿನಿ ಕಿರಣ್ ಕುಮಾರ್ ವಂದಿಸಿದರು. ಕುಂತಿ ಅವರ ಪತಿ ಕೆ.ಜಿ.ಬೋಪಯ್ಯ ಸೇರಿದಂತೆ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಹಾಜರಿದ್ದರು.