ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾಷಷ್ಠಿ ಜಾತ್ರೋತ್ಸವದ ಲಕ್ಷದೀಪೋತ್ಸವದ ದಿನ ಕುಣಿತ ಭಜನೋತ್ಸವ ನಡೆಯಲಿದೆ.ಶ್ರೀ ದೇವಳದ ರಥಬೀದಿ ಮತ್ತು ಅಡ್ಡಬೀದಿಯಲ್ಲಿ ನಡೆಯುವ ಕುಣಿತ ಭಜನೆಯಲ್ಲಿ ಭಾಗವಹಿಸಲು ಸಾರ್ವಜನಿಕ ಭಕ್ತರಿಗೆ ಅವಕಾಶ ಕಲ್ಲಿಸಲಾಗಿದೆ.ಭಾಗವಹಿಸುವ ಕುಣಿತ ಭಜನಾ ತಂಡಗಳು
ಡಿ.9ರಂದು ಅಪರಾಹ್ನ 2 ಗಂಟೆಯ ಒಳಗೆ ಶ್ರೀ ದೇವಳದ ಕಚೇರಿಯಲ್ಲಿ ಹೆಸರು ನೋಂದಾಯಿಸಬಹುದು ಅಥವಾ ಭಜನಾ ತಂಡಗಳು ಆನ್ಲೈನ್ ರಿಜಿಸ್ಟ್ರೇಷನ್ ನೋಂದಾಯಿಸಬಹುದು. ಎಂದು ಶ್ರೀ ದೇವಳದ ಪ್ರಕಟಣೆ ತಿಳಿಸಿದೆ. ತಂಡದಲ್ಲಿ ಗರಿಷ್ಟ 10 ಮಂದಿ ಮಾತ್ರ ಇರತಕ್ಕದ್ದು. 10ಕ್ಕಿಂತ ಅಧಿಕ ಮಂದಿ ಇದ್ದಲ್ಲಿ 1 ಕ್ಕಿಂತ ಹೆಚ್ಚು ತಂಡ ರಚಿಸಬಹುದಾಗಿದೆ. ಭಾಗವಹಿಸುವ ಭಜನಾ ತಂಡಗಳು ಭಾರತೀಯ ಉಡುಗೆಗಳನ್ನು ಧರಿಸಿರಬೇಕು. ಭಜನಾ ತಂಡಗಳು ತಮ್ಮ ಸ್ವಂತ ವೆಚ್ಚದಲ್ಲಿ ಭಾಗವಹಿಸಬೇಕು.ಡಿ.12ರಂದು ಲಕ್ಷದೀಪೋತ್ಸವದ ದಿನ ಸಂಜೆ 6.30ರಿಂದ 8.30ರ ತನಕ ಕುಣಿತ ಭಜನೆ ನಡೆಯಲಿದೆ. ಭಜನೆಯ ನೇತೃತ್ವವನ್ನು ಮೈಸೂರು ರಾಮಚಂದ್ರ ಆಚಾರ್ ಮತ್ತು ತಂಡ ವಹಿಸಲಿದೆ.








