ಸುಳ್ಯ:ಇತಿಹಾಸ ಪ್ರಸಿದ್ಧ ಕುಂಭಕ್ಕೋಡು ವಲಿಯತ್ತುಲ್ಲಾಹಿ ಮಣವಾಟಿ ಬೀವಿ ಮಖಾಂ ಶರೀಫ್ನಲ್ಲಿ ಉರೂಸ್ ಮುಬಾರಕ್ ಮತ್ತು ಪಳ್ಳಿ ನೇರ್ಚೆ ಕಾರ್ಯಕ್ರಮ ಡಿ.19ರಿಂದ 22ರ ತನಕ ನಡೆಯಲಿದೆ ಎಂದು ಉರೂಸ್ ಸಮಿತಿ ಹಾಗೂ ಜಮಾಅತ್ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಉರೂಸ್ ಸಮಿತಿಯ ಗೌರವ ಸಲಹೆಗಾರರಾದ ಪಿ.ಎಂ. ಮೂಸಾ ಕುಂಞಿ ಪೈಂಬಚ್ಚಾಲು ಹಾಗೂ ಕುಂಭಕ್ಕೋಡು ಜಮಾ ಅತ್ ಕಮಿಟಿ ಅಧ್ಯಕ್ಷ ಇಸ್ಮಾಯಿಲ್ ಸಅದಿ’ ಜಾತಿ ಧರ್ಮ ಬೇಧವಿಲ್ಲದೆ ಸರ್ವರ ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ ನೀಡುವ
ಅಭಯ ಕೇಂದ್ರ ಕುಂಭಕ್ಕೋಡು ಮುಖಾಮಿನಲ್ಲಿ ಅಂತ್ಯ ವಿಶ್ರಮ ಗೊಳ್ಳುತ್ತಿರುವ ವಲಿಯತುಲ್ಲಾಹಿ ಮಣವಾಟಿ ಬೀವಿ ಅವರ ಹೆಸರಿನಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ‘ಉರೂಸ್ ಮುಬಾರಕ್’ ಡಿ. 19, 20, 21, 22ನೇ ದಿನಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಡಿ.19ರಂದು ಉರೂಸ್ ಉದ್ಘಾಟನಾ ಸಮಾರಂಭ ನಡೆಯಲಿದೆ. ಬೆಳಿಗ್ಗೆ 9.30ಕ್ಕೆ ಉರೂಸ್ ಕಮಿಟಿ ಅಧ್ಯಕ್ಷ ಇಬ್ರಾಹಿಂ ಹಾಜಿ ಕೊಯಂಗಿ ಧ್ವಜಾರೋಹಣ ನೆರವೇರಿಸುವರು.ಸಂಜೆ 7ರಿಂದ ಖತ್ಮುಲ್ ಕುರ್ಅನ್ ಮತ್ತು ಪಳ್ಳಿ ನೇರ್ಚೆ ಮೌಲೀದ್ ನಡೆಯಲಿದೆ. ಅಸ್ಸಯ್ಯದ್ ಉಮರ್ ಜಿಫ್ರಿ ಆಲ್ ಹನೀಫಿ ಕೊಡಿಞ್ಞಿ ಮಲಪ್ಪುರಂ ನೇತೃತ್ವ ವಹಿಸುವರು.ಅಸ್ಸಯ್ಯಿದ್ ಕುಂಞಿಕ್ಕೋಯ ಸಅದಿ ತಂಙಳ್ ಉದ್ಘಾಟಿಸುವರು.
ಉರೂಸ್ ಕಮಿಟಿ ಅಧ್ಯಕ್ಷ ಇಬ್ರಾಹಿಂ ಹಾಜಿ ಕೊಯಂಗಿ ಅಧ್ಯಕ್ಷತೆ ವಹಿಸುವರು. ಮುಹಮ್ಮದ್ ಇರ್ಷಾದ್ ಅಝ್ಹರಿ ಪರಂಬಲ್ಪೀಡಿಗೆ ಮಲಪ್ಪುರಂ ಮುಖ್ಯ ಭಾಷಣ ಮಾಡುವರು. ಕುಂಭಕ್ಕೋಡು ಜಮಾ ಅತ್ ಕಮಿಟಿ ಜೊತೆ ಕಾರ್ಯದರ್ಶಿ ಮುಹಮ್ಮದ್ ಕುಂಞಿ, ಪೈಂಬಚ್ಚಾಲ್ ಜಮಾ ಅತ್ ಕಮಿಟಿ ಅಧ್ಯಕ್ಷ ಕೆ.ಪಿ, ಅಬ್ದುಲ್ ಖಾದರ್ ಉಪಸ್ಥಿತರಿರುವರು.

ಡಿ.20ಕ್ಕೆ ಸಂಜೆ 7ಕ್ಕೆ ಮತ ಪ್ರಭಾಷಣ ನಡೆಯಲಿದೆ.
ನಿಯಾಝ್ ಸಅದಿ ಉದ್ಘಾಟನಾ ದುವಾಃ ನೆರವೇರಿಸುವರು.
ಕುಂಭಕ್ಕೋಡು ಜಮಾ ಅತ್ ಉಪಾಧ್ಯಕ್ಷ ಮುಹಮ್ಮದ್ ಅಲ್ ಮದೀನ ಅಧ್ಯಕ್ಷತೆ ವಹಿಸುವರು. ಮೊಗರ್ಪಣೆ ಜುಮಾ ಮಸೀದಿ ಖತೀಬರಾದ ಅಬ್ದುಲ್ ಖಾದರ್ ಸಖಾಫಿ ಮುದುಗಡ ಮುಖ್ಯ ಭಾಷಣ ಮಾಡುವರು. ಹಾಜಿ ಮಹಮ್ಮದ್ ಕೋಲ್ಚಾರ್, ಕೋಶಾಧಿಕಾರಿ ಜಮಾಅತ್ ಕಮಿಟಿ ಕುಂಭಕ್ಕೋಡು, ಇಸ್ಮಾಯಿಲ್ ಮದನಿ ಅಧ್ಯಕ್ಷರು ಕುಂಭಕ್ಕೋಡು ಯು.ಎ.ಇ ಜಮಾಅತ್ ಕಮಿಟಿ ಉಪಸ್ಥಿತರಿರುವರು.
ಡಿ. 21ರಂದು ಸಂಜೆ 7ಕ್ಕೆ ಮತ ಪ್ರಭಾಷಣ ನಡೆಯಲಿದೆ.
ಕುಂಭಕ್ಕೋಡು ಜಮಾತ್ ಸಮಿತಿ ಪ್ರಧಾನ ಕಾರ್ಯದರ್ಶಿ
ಇಬ್ರಾಹಿಂ ಹಾಜಿ ಅಲ್ ಮದೀನ ಅಧ್ಯಕ್ಷತೆ ವಹಿಸುವರು.ಅಬ್ದುಲ್ ರಹ್ಮಾನ್ ಸಖಾಫಿ ಅಮ್ಚಿನಡ್ಕ ಖತೀಬರು. ಬಿ.ಜೆ.ಎಂ ಪೈಂಬಚ್ಚಾಲು ಪ್ರಾಸ್ತಾವಿಕವಾಗಿ ಮಾತನಾಡುವರು. ಮುಹಮ್ಮದಲಿ ಸಖಾಫಿ ಕುಯಿತ್ತಲ್ ಖತೀಬರು ಕುಂಭಕ್ಕೋಡು ಜಮಾಅತ್ ಮುಖ್ಯ ಭಾಷಣ ಮಾಡುವರು.
ಹಾಜಿ ಜಿ.ಎ.ಮುಹಮ್ಮದ್ ಏಣಾವರ, ಮಾಜಿ ಅಧ್ಯಕ್ಷರು, ಜಮಾತ್ ಕಮಿಟಿ ಕುಂಭಕೋಡು, ಅಬ್ದುಲ್ ರಹ್ಮಾನ್ ಕೋಯಂಗಿ ಪಿಆರ್ಒ ಜಮಾತ್ ಸಮಿತಿ ಕುಂಭಕೋಡು ಉಪಸ್ಥಿತರಿರುವರು.

22ರಂದು ಸಮಾರೋಪ ಸಮಾರಂಭ ನಡೆಯಲಿದೆ.
ಅಸರ್ ನಮಾಝ್ ಬಳಿಕ ಉರೂಸ್ ಮೌಲೀದ್ ಮತ್ತು ಮಖಾಂ ಝಿಯಾರತ್ ನಡೆಯಲಿದೆ. ಅಸ್ಸಯ್ಯದ್ ಉಮರ್ ಜಿಫ್ರಿ ಅಲ್ ಹನೀಫಿ ಕೋಡಿಞ್ಞಿ ಮಲಪ್ಪುರಂ ನೇತೃತ್ವ ವಹಿಸುವರು.
ರಾತ್ರಿ ಸಭಾ ಕಾರ್ಯಕ್ರಮ ನಡೆಯಲಿದ್ದು ಅಸ್ಪಯ್ಯದ್ ಅಬ್ದುಲ್ ರಹ್ಮಾನ್ ಮಶ್ಹೂದ್ ಅಲ್ ಬುಖಾರಿ ಕೂರತ್ ಉದ್ಘಾಟನಾ ದುವಾ ನೆರವೇರಿಸುವರು. ಕುಂಭಕ್ಕೋಡು ಜಮಾಅತ್ ಕಮಿಟಿ ಅಧ್ಯಕ್ಷ ಹಾಜಿ ಇಸ್ಮಾಯಿಲ್ ಸಅದಿ ಅಧ್ಯಕ್ಷತೆ ವಹಿಸುವರು.ಗಾಂಧಿನಗರ ಜುಮಾ ಮಸೀದಿ ಖತೀಬರಾದ ಅಶ್ರಫ್ ಕಾಮಿಲ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡುವರು.ಡಾ. ಅಸ್ಪಯ್ಯದ್ ಶಿಹಾಬುದ್ದೀನ್ ಅಲ್ ಅಹ್ದಲ್ (ಮುತ್ತನ್ನೂರು ತಂಙಳ್) ಮುಖ್ಯ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ಸ್ಪೀಕರ್ ಡಾ.ಯು.ಟಿ. ಖಾದರ್ ಫರೀದ್ ಭಾಗವಹಿಸುವರು. ಅತಿಥಿಗಳಾಗಿ ಸುಲೈಮಾನ್ ಮುಸ್ಲಿಯಾರ್,ಸಫಾ (ಸಾದಿಯಾ) ಆಂಗ್ಲ ಮಾಧ್ಯಮ ಶಾಲೆ ಕುತ್ತಿಕೋಲ್, ಕಾರ್ಮಿಕ ಕನಿಷ್ಠ ವೇತನಾ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್, ಸೂಡ ಅಧ್ಯಕ್ಷ ಕೆ.ಎಂ. ಮುಸ್ತಫ, ಪ್ರಮುಖರಾದ ಅಬ್ದುಲ್ ಹಮೀದ್ ಬೀಜಕೊಚ್ಚಿ, ಅಬೂಬಕರ್ ಅಡ್ಕಾರ್, ಮೂಸ ಕುಂಞಿ ಪಿ. ಎಂ. ಪೈಂಬಚ್ಚಾಲು, ಹಮೀದ್ ಕುತ್ತಮೊಟ್ಟೆ, ಮುಹಮ್ಮದ್ ಕುಂಞಿ ಗೂನಡ್ಕ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಮೂಸಾ ಕುಂಞಿ ಪೈಂಬಚ್ಚಾಲು ಹಾಗೂ ಇಸ್ಮಾಯಿಲ್ ಸಅದಿ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಉರೂಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಸಅದಿ,ಜಮಾ ಅತ್ ಕಮಿಟಿ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಹಾಜಿ ಅಲ್ ಮದೀನ ಉಪಸ್ಥಿತರಿದ್ದರು.













