ಸುಳ್ಯ:ಇತಿಹಾಸ ಪ್ರಸಿದ್ಧ ಕುಂಭಕ್ಕೋಡು ವಲಿಯತ್ತುಲ್ಲಾಹಿ ಮಣವಾಟಿ ಬೀವಿ ಮಖಾಂ ಶರೀಫ್ನಲ್ಲಿ ನಾಲ್ಕು ದಿನಗಳ ಕಾಲ ನಡೆದ
ಉರೂಸ್ ಮುಬಾರಕ್ ಮತ್ತು ಪಳ್ಳಿ ನೇರ್ಚೆ ಸಮಾಪನಗೊಂಡಿತು.
ಅಸರ್ ನಮಾಝ್ ಬಳಿಕ ಉರೂಸ್ ಮೌಲೀದ್ ಮತ್ತು ಮಖಾಂ ಝಿಯಾರತ್ ನಡೆಯಿತು. ಅಸ್ಸಯ್ಯದ್ ಉಮರ್ ಜಿಫ್ರಿ ಅಲ್ ಹನೀಫಿ ಕೋಡಿಞ್ಞಿ ಮಲಪ್ಪುರಂ ನೇತೃತ್ವ ವಹಿಸಿದ್ದರು. ಸಮಾರೋಪ ಸಮಾರಂಭದಲ್ಲಿ
ಅಸ್ಪಯ್ಯದ್ ಅಬ್ದುಲ್ ರಹ್ಮಾನ್ ಮಶ್ಹೂದ್ ಅಲ್ ಬುಖಾರಿ ಕೂರತ್ ಉದ್ಘಾಟನಾ ದುವಾ ನೆರವೇರಿಸಿದರು. ಕುಂಭಕ್ಕೋಡು ಜಮಾಅತ್ ಕಮಿಟಿ ಅಧ್ಯಕ್ಷ ಹಾಜಿ ಇಸ್ಮಾಯಿಲ್ ಸಅದಿ ಅಧ್ಯಕ್ಷತೆ ವಹಿಸಿದ್ದರು.ಗಾಂಧಿನಗರ ಜುಮಾ ಮಸೀದಿ ಖತೀಬರಾದ ಅಶ್ರಫ್ ಕಾಮಿಲ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡುವರು.ಡಾ. ಅಸ್ಪಯ್ಯದ್ ಶಿಹಾಬುದ್ದೀನ್ ಅಲ್ ಅಹ್ದಲ್ (ಮುತ್ತನ್ನೂರು ತಂಙಳ್) ಮುಖ್ಯ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ

ಸುಲೈಮಾನ್ ಮುಸ್ಲಿಯಾರ್,ಸಫಾ (ಸಾದಿಯಾ) ಆಂಗ್ಲ ಮಾಧ್ಯಮ ಶಾಲೆ ಕುತ್ತಿಕೋಲ್, ಕಾರ್ಮಿಕ ಕನಿಷ್ಠ ವೇತನಾ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಾಹಿದ್ ತೆಕ್ಕಿಲ್, ಸೂಡ ಅಧ್ಯಕ್ಷ ಕೆ.ಎಂ. ಮುಸ್ತಫ, ಪ್ರಮುಖರಾದ ಅಬ್ದುಲ್ ಹಮೀದ್ ಬೀಜಕೊಚ್ಚಿ, ಅಬೂಬಕರ್ ಅಡ್ಕಾರ್, ಮೂಸ ಕುಂಞಿ ಪಿ. ಎಂ. ಪೈಂಬಚ್ಚಾಲು, ಹಮೀದ್ ಕುತ್ತಮೊಟ್ಟೆ, ಮುಹಮ್ಮದ್ ಕುಂಞಿ ಗೂನಡ್ಕ, ಕೆ.ಎಸ್.ಉಮ್ಮರ್, ಸಿದ್ದಿಕ್ ಕೊಕ್ಕೊ ಮತ್ತಿತರರು ಭಾಗವಹಿಸಿದ್ದರು. ಕುಂಭಕ್ಕೋಡು ಜಮಾ ಅತ್ ಕಮಿಟಿ ಅಧ್ಯಕ್ಷ ಇಸ್ಮಾಯಿಲ್ ಸಅದಿಉರೂಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಸಅದಿ,
ಜಮಾ ಅತ್ ಕಮಿಟಿ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಹಾಜಿ ಅಲ್ ಮದೀನ, ಜಮಾ ಅತ್ ಕಮಿಟಿ ಹಾಗು ಉರೂಸ್ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
















