ಸುಳ್ಯ: ಸುಳ್ಯದ ಫ್ಯಾಷನ್ ಲೋಕದ ವಿಸ್ಮಯ ವಸ್ತ್ರ ಮಳಿಗೆ ಕುಂ ಕುಂ ಫ್ಯಾಷನ್ ಶೋ ರೂಮ್ನಲ್ಲಿ ಫೆಸ್ಟಿವಲ್ ಸೀಸನ್ ಸೇಲ್ ಆರಂಭಗೊಂಡಿದೆ. ಜೊತೆಗೆ ಗ್ರಾಹಕರಿಗಾಗಿ ಆಕರ್ಷಕ ಬಹುಮಾನಗಳ ಯೋಜನೆಯನ್ನೂ ಹಮ್ಮಿಕೊಂಡಿದ್ದು ಗ್ರಾಹಕರನ್ನು ಕೈ ಬೀಸಿ ಕರೆಯುತಿದೆ. ಅತೀ ಕಡಿಮೆ ದರದಲ್ಲಿ ಹೊಚ್ಚ ಹೊಸ ವರ್ಣ, ವಿನ್ಯಾಸದ ವಸ್ತ್ರಗಳನ್ನು ಮಾರಾಟ ಮಾಡಲಾಗುತಿದೆ.ಸುಳ್ಯ ಮುಖ್ಯ ರಸ್ತೆಯಲ್ಲಿ
ದ್ವಾರಕಾ ಹೋಟೆಲ್ನ ಮುಂಭಾಗದ ಶುಭಾ ಕಾಂಪ್ಲೆಕ್ಸ್ನಲ್ಲಿ ಕುಂ ಕುಂ ಫ್ಯಾಷನ್ಸ್’ ವರ್ಣ ವಸ್ತ್ರಗಳ ಅದ್ಭುತ ಲೋಕವೇ ತೆರೆದುಕೊಂಡಿದೆ. ಅತ್ಯಾಕರ್ಷಕ ವಸ್ತ್ರಗಳ ಸಂಗ್ರಹದೊಂದಿಗೆ ಮೇಳೈಸಿರುವ ಕುಂ ಕುಂ ನಲ್ಲಿ
ಹೊಸ ಹೊಸ ವಿನ್ಯಾಸದ ಮದುವೆ ಜವುಳಿ ಸೇರಿದಂತೆ ಮಹಿಳೆಯರ,ಪುರುಷರ ಮತ್ತು ಮಕ್ಕಳ ಎಲ್ಲಾ ರೀತಿಯ ಉಡುಪುಗಳನ್ನು ಅತೀ ಕಡಿಮೆ ದರದಲ್ಲಿ ತಮ್ಮದಾಗಿಸುವ ಸುವರ್ಣಾವಕಾಶವನ್ನು ಗ್ರಾಹಕರಿಗೆ ಸಮರ್ಪಿಸುತ್ತಿದೆ. ಅಲ್ಲದೆ ಗ್ರಾಹಕರಿಗೆ ಇಷ್ಟವಾಗುವಂತಹ ವಿನ್ಯಾಸದ ಕಲರ್ ಫುಲ್ ಡ್ರೆಸ್ ಕಲೆಕ್ಷನ್ಗಳ ಅಪೂರ್ವ ಸಂಗ್ರಹವೇ ಇಲ್ಲಿದೆ.
ಫೆಸ್ಟಿವಲ್ ಸೀಸನ್ ಸೇಲ್ಗೆ ಚಾಲನೆ ಹಾಗೂ ಗೌರವಾರ್ಪಣೆ:
ಗ್ರಾಹಕರಿಗಾಗಿ ಈ ವರ್ಷ ಸೆಪ್ಟೆಂಬರ್ 1 ರಿಂದ ಬಿಗ್ ಫೆಸ್ಟಿವಲ್ ಸೀಸನ್ ಸೇಲ್ಗೆ ಚಾಲನೆ ನೀಡಲಾಗಿದೆ. ಸಂಸ್ಥೆಯ ಮಾಲಕ ಧನ್ರಾಮ್ ಪಟೇಲ್ ದೀಪ ಬೆಳಗಿಸಿ ಚಾಲನೆ ನೀಡಿದರು.ಬಳಿಕ ಸುಳ್ಯದ ಸ್ವಚ್ಚತೆಯಲ್ಲಿ ಸದಾ ಕರ್ತವ್ಯ ನಿರ್ವಹಿಸುವ ಸುಳ್ಯ ನಗರ ಪಂಚಾಯತ್ನ 19 ಮಂದಿ ಪೌರ ಕಾರ್ಮಿಕರನ್ನು ಸಂಸ್ಥೆಗೆ ಬರ ಮಾಡಿಕೊಂಡು ಗೌರವಿಸಲಾಯಿತು.
150 ದಿನಗಳ ಸೇಲ್-ಆಕರ್ಷಕ ಬಹುಮಾನ:
150 ದಿನಗಳ ಕಾಲ ಗ್ರಾಹಕರು ಖರೀದಿಸುವ ವಸ್ತ್ರಗಳಿಗೆ ಗಿಫ್ಟ್ ನೀಡುವ ಜೊತೆಗೆ ಸ್ಕ್ರಾಚ್ ಕಾರ್ಡ್ ನೀಡಲಾಗುತ್ತದೆ. 999 ರೂ ಖರೀದಿಗೆ ಸಿಲ್ವರ್ ಕಾರ್ಡ್ , 2499 ರೂ ಖರೀದಿಗೆ ಗೋಲ್ಡ್ ಕಾರ್ಡ್ , 4999 ರೂ. ಖರೀದಿಗೆ ಡೈಮಂಡ್ ಸ್ಕ್ರಾಚ್ ಕಾರ್ಡ್ ನೀಡಲಾಗುತ್ತದೆ. ಅಲ್ಲದೆ ಬಂಪರ್ ಬಹುಮಾನವಾಗಿ ಬೈಕ್, ಸ್ಕೂಟಿ, ಪ್ರಿಜ್, ಟಿ.ವಿ., ವಾಷಿಂಗ್ ಮೆಷಿನ್ ಹಾಗೂ ಆಕರ್ಷಕ ಬಹುಮಾನಗಳು ಇರಲಿವೆ. ಪ್ರತೀ ಖರೀದಿಗೆ ಆಕರ್ಷಕ ಗಿಫ್ಟ್ಗಳು ಇದ್ದು, ಈ ಸುವರ್ಣಾವಕಾಶವನ್ನು ಸದುಪಯೋಗಿಸಿಕೊಳ್ಳಿ ಎಂದು ಸಂಸ್ಥೆಯ ಮಾಲೀಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಲ್ಲಿ ಅತ್ಯುತ್ತಮ ಗುಣಮಟ್ಟದ ಬ್ರಾಂಡೆಡ್ ವಸ್ತ್ರಗಳು ಅತೀ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತಿದೆ.
ಆಕರ್ಷಕ ಬಣ್ಣದ, ವಿನ್ಯಾಸದ ಮಧುವೆ ವಸ್ತ್ರಗಳ ಅಪೂರ್ವ ಸಂಗ್ರಹವೇ ಇದೆ. ಮನಸ್ಸಿಗೆ ಒಪ್ಪುವ ಮಕ್ಕಳ ಬಟ್ಟೆಗಳು, ಮಹಿಳೆಯರ, ಪುರುಷರ ಹೀಗೆ ಎಲ್ಲಾ ಪ್ರಾಯದ, ವರ್ಗದ ಜನರ ಬಟ್ಟೆಗಳ ಆಧುನಿಕ ಫ್ಯಾಷನ್ ವಸ್ತ್ರಗಳ ಅದ್ಭುತ ಲೊಕವೇ ಇಲ್ಲಿ ತೆರೆದುಕೊಂಡಿದೆ. ವಿವಿಧ ಕಂಪೆನಿಗಳ ಎಲ್ಲಾ ವಿಧದ ಬ್ರಾಂಡೆಡ್ ಬಟ್ಟೆಗಳ ಅಪೂರ್ವ ಸಂಗ್ರವೇ ಬಂದಿದೆ. ಮತ್ತೆ ತಡವೇಕೆ ಸಾಲು ಸಾಲು ಹಬ್ಬಗಳ ಸಂಭ್ರಮ ಹೆಚ್ಚಿಸಲು ಕುಂ ಕುಂ ಫ್ಯಾಶನ್ಸ್ಗೆ ಭೇಟಿ ಕೊಡಿ. ಬಣ್ಣದ ಬಟ್ಟೆಗಳನ್ನು ಖರೀದಿಸಿ ಹಬ್ಬಗಳನ್ನು ಆನಂದಿಸಿ.