ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಕುಲ್ಕುಂದದ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೈವದ 54ನೇ ವರ್ಷದ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲವು ಶ್ರದ್ಧಾ ಭಕ್ತಿಯಿಂದ ಸಂಪನ್ನಗೊಂಡಿತು. ಇದರೊಂದಿಗೆ ಶ್ರೀ ದೈವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕದ 9ನೇ ವಾರ್ಷಿಕೋತ್ಸವವು ನೆರವೇರಿತು. ಸಹಸ್ರಾರು ಭಕ್ತಾಧಿಗಳು ಶ್ರೀ ದೈವದ ದರುಶನ ಪಡೆದು ಪ್ರಸಾದ ಸ್ವೀಕರಿಸಿ
ಕೃತಾರ್ಥರಾದರು. ದೈವಸ್ಥಾನದ ಪ್ರಧಾನ ಅರ್ಚಕ ರಾಮಚಂದ್ರ ಮಣಿಯಾಣಿ ಸರ್ವ ಭಕ್ತಾಧಿಗಳಿಗೆ ಗಂಧಪ್ರಸಾದ ನೀಡಿದರು.
ಶುಕ್ರವಾರ ಸಂಜೆ ಭಂಡಾರ ತೆಗೆದ ಬಳಿಕ ಭಂಡಾರದ ಮೆರವಣಿಗೆಯು ದೈವಸ್ಥಾನದಿಂದ ಕುಲ್ಕುಂದದ ತನಕ ನಡೆಯಿತು. ಬಳಿಕ ಮೇಲೇರಿಗೆ ಅಗ್ನಿಸ್ಪರ್ಶ ಮಾಡಲಾಯಿತು.ಅಸಂಖ್ಯಾತ ಭಕ್ತರು ಈ ಸಂದರ್ಭದಲ್ಲಿ ಮೇಲೇರಿಗೆ ಎಣ್ಣೆ ಎರಚಿ ಹರಕೆ ತೀರಿಸಿದರು. ನಂತರ ಕುಲ್ಕುಂದ ಅಂಗನವಾಡಿ ಕೇಂದ್ರದ ಪುಟಾಣಿಗಳಿಂದ, ಊರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಬಳಿಕ ಶೃಂಗೇರಿ ಪ್ರೆಂಡ್ಸ್ ಕುಲ್ಕುಂದ ಕಾಲನಿ ಆಶ್ರಯದಲ್ಲಿ ಹಾಸ್ಯ ಕಲಾವಿದ ಉಮೇಶ್ ಮಿಜಾರ್ ಮತ್ತು ಬಳಗದಿಂದ ತೆಲಿಕೆದ ಗೊಂಚಿಲ್ ನೆರವೇರಿತು.ಬಳಿಕ ರಾತ್ರಿ ಕುಲ್ಚಾಟು ದೈವದ ನಡಾವಳಿ ನಡೆಯಿತು. ನಂತರ ಗೆಜ್ಜೆಗಿರಿ

ಮೇಳದವರಿಂದ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ಪ್ರದರ್ಶಿತವಾಯಿತು. ಶನಿವಾರ ಪ್ರಾತಃಕಾಲ ಕಳಸಾಟ ನಡೆಯಿತು.ನಂತರ ಶ್ರೀ ಮಹಾವಿಷ್ಣುಮೂರ್ತಿ ದೈವದ ಅಗ್ನಿಪ್ರವೇಶ ನೆರವೇರಿತು. ನಂತರ ಮಾರಿಕಳ ಹಾಗೂ ದೈವದಲ್ಲಿ ಭಕ್ತಾಧಿಗಳು ತಮ್ಮ ಅರಿಕೆಯನ್ನು ನಿವೇದಿಸಿ, ಕಾಣಿಕೆ ಅರ್ಪಿಸಿ ಪ್ರಸಾದ ಸ್ವೀಕರಿಸಿದರು. ನಂತರ ಗುಳಿಗ ದೈವದ ನಡಾವಳಿ ಜರುಗಿತು.
ಈ ಸಂದರ್ಭದಲ್ಲಿ ದೈವಸ್ಥಾನದ ಪ್ರಧಾನ ಪೂಜಾರಿ ರಾಮಚಂದ್ರ ಮಣಿಯಾಣಿ, ಶ್ರೀ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಕುಮಾರ್ ರುದ್ರಪಾದ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಶ್ರೀವತ್ಸ ಬೆಂಗಳೂರು, ದೈವಸ್ಥಾನದ ಗೌರವಾಧ್ಯಕ್ಷ ಎಂ.ಚಂದ್ರಹಾಸ ಭಟ್, ಕಾರ್ಯಾಧ್ಯಕ್ಷ ಹರೀಶ್ ಇಂಜಾಡಿ, ಕಾರ್ಯದರ್ಶಿ ರಾಜೇಶ್ ಎನ್.ಎಸ್, ಸಂಚಾಲಕ ವೇಣುಗೋಪಾಲ ಎನ್.ಎಸ್, ಕೋಶಾಧಿಕಾರಿ ರತ್ನಾಕರ.ಎಸ್, ಅಭಿವೃದ್ದಿ ಸಮಿತಿ ಅಧ್ಯಕ್ಷ ಎ.ವೆಂಕಟ್ರಾಜ್, ಸದಸ್ಯರಾದ ಎಂ.ಹರೀಶ್ ಕಾಮತ್, ಗೋಪಾಲ ಮಲೆ, ರಾಜೇಶ್ ಕುಲ್ಕುಂದ, ಸುರೇಶ್ ಉಜಿರಡ್ಕ, ಕೃಷ್ಣ ಮಣಿಯಾಣಿ, ಸನತ್ಕುಮಾರ್.ಸಿ.ಭಟ್, ರಾಜೇಶ್ ಕಾಶಿಕಟ್ಟೆ, ನವೀನ್ ಮಣಿ, ಮಹಾಬಲ ರೈ, ವಿಮಲಾ ರಂಗಯ್ಯ, ರವಿ ಕಕ್ಕೆಪದವು, ಜಯಪ್ರಕಾಶ್ ಜಾಡಿಮನೆ ಸೇರಿದಂತೆ ಸಹಸ್ರಾರು ಭಕ್ತಾಧಿಗಳು ಉಪಸ್ಥಿತರಿದ್ದರು.