ಸುಬ್ರಹ್ಮಣ್ಯ: ಸುಬ್ರಹ್ಮಣ್ಯದ ಕುಲ್ಕುಂದದ ಐತಿಹಾಸಿಕ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ 54ನೇ ವರ್ಷದ ಒತ್ತೆಕೋಲವು ಎರಡು ದಿನಗಳ ಕಾಲ ಭಕ್ತಿ ಶ್ರದ್ಧೆಯಿಂದ ನಡೆಯಲಿದೆ.ಮಾ.3ಸಂಜೆ ಭಂಡಾರ ಹೊರಟು ಮೇಲೇರಿಗೆ ಅಗ್ನಿ ಸ್ಪರ್ಶ ನಡೆಯಲಿದೆ.ನಂತರ ಸ್ಥಳಿಯ ವಿದ್ಯಾರ್ಥಿಗಳಿಂದ ವಿವಿಧ
ಮನೋರಂಜನಾ ಕಾರ್ಯಕ್ರಮ ನೆರವೇರಲಿದೆ.ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಲಿದೆ. ನಂತರ ಶೃಂಗೇರಿ ಪ್ರೆಂಡ್ಸ್ ಕುಲ್ಕುಂದ ಕಾಲನಿ ಇವರ ಆಶ್ರಯದಲ್ಲಿ ಸತತ 4ನೇ ಬಾರಿಗೆ ಸಾಂಸ್ಕೃತಿಕ ಕಾರ್ಯಕ್ರಮ ಉಮೇಶ್ ಮಿಜಾರ್ ತಂಡದಿಂದ ತೆಲಿಕೆದ ಗೊಂಚಿಲ್ ಪ್ರದರ್ಶಿತವಾಗಲಿದೆ. ತದನಂತರ ಕುಳ್ಚಾಟು ದೈವದ ನಡಾವಳಿ ನಡೆಯಲಿದೆ.ಬಳಿಕ ಬಳಿಕ ಗೆಜ್ಜೆಗಿರಿ ಮೇಳದವರಿಂದ ತುಳು ಯಕ್ಷಗಾನ ಬ್ರಹ್ಮಕಲಶ ನೆರವೇರಲಿದೆ. ಮಾ.4 ರಂದು ಮುಂಜಾನೆ 4.30ಗೆ ಕಳಸಾಟ ಹೋಗುವುದು ಬಳಿಕ ಪ್ರಾತಃಕಾಲ 5 ಗಂಟೆಗೆ ಶ್ರೀ ಮಹಾವಿಷ್ಣುಮೂರ್ತಿ ದೈವದ ಅಗ್ನಿಪ್ರವೇಶ,ಮಾರಿಕಳ, ಗಂಧಪ್ರಸಾದ ವಿತರಣೆ ನಡೆಯಲಿದೆ.ಬಳಿಕ ಗುಳಿಗ ದೈವದ ನಡಾವಳಿ ನೆರವೇರಲಿದೆ ಎಂದು ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಕುಮಾರ್ ರುದ್ರಪಾದ ತಿಳಿಸಿದ್ದಾರೆ