ಸುಬ್ರಹ್ಮಣ್ಯ: ಸುಬ್ರಹ್ಮಣ್ಯದ ಕುಲ್ಕುಂದ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ೫೫ನೇ ವರ್ಷದ ಒತ್ತೆಕೋಲದ ನಿಮಿತ್ತ ಶನಿವಾರ ರಾತ್ರಿ ೯ನೇ ವರ್ಷದ ಕೊರತಿಯಮ್ಮ ದೈವದ ನೇಮೋತ್ಸವವು ಭಕ್ತಿ ಶ್ರದ್ಧೆಯಿಂದ ನಡೆಯಿತು.ಆರಂಭದಲ್ಲಿ ಶ್ರೀ ದೈವದ ನರ್ತನ ಸೇವೆ ನೆರವೇರಿತು.ಬಳಿಕ ಪ್ರಸಾದ ವಿತರಣೆ ನಡೆಯಿತು.ನಂತರ ಹರಿಕೆ ಮತ್ತು ಕಾಣಿಕೆ ಸಮರ್ಪಣೆ ನೆರವೇರಿತು.ಬಳಿಕ

ಅನ್ನಸಂರ್ಪಣೆ ನೆರವೇರಿತು. ಸೋಮವಾರ ಮುಂಜಾನೆ ಮಹಾವಿಷ್ಣುಮೂರ್ತಿ ದೈವದ ೫೫ನೇ ವರ್ಷದ ಒತ್ತೆಕೋಲ ನೆರವೇರಲಿದೆ.ಈ ನಿಮಿತ್ತ ಮುಂಜಾನೆ ಶ್ರೀ ದೈವದ ಅಗ್ನಿಪ್ರವೇಶ,ಮಾರಿಕಳ, ಗಂಧಪ್ರಸಾದ ವಿತರಣೆ ನಡೆಯಲಿದೆ.ಬಳಿಕ ಗುಳಿಗ ದೈವದ ನಡಾವಳಿ ನೆರವೇರಲಿದೆ.ಈ ಸಂದರ್ಭ ದೈವಸ್ಥಾನ ಮುಖ್ಯ ಪೂಜಾರಿ ರಾಮಚಂದ್ರ ಮಣಿಯಾಣಿ, ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಕುಮಾರ್ ರುದ್ರಪಾದ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಎ.ವೆಂಕಟ್ರಾಜ್, ಗೌರವಾಧ್ಯಕ್ಷ ಎಂ.ಚಂದ್ರಹಾಸ ಭಟ್, ಕರ್ಯಾಧ್ಯಕ್ಷ ಹರೀಶ್ ಇಂಜಾಡಿ, ಕಾರ್ಯದರ್ಶಿ ರಾಜೇಶ್ಎನ್.ಎಸ್, ಕೋಶಾಧಿಕಾರಿ ರತ್ನಾಕರ.ಎಸ್, ಸದಸ್ಯರಾದ ಗೋಪಾಲ ಮಲೆ, ಕೃಷ್ಣ ಮಣಿಯಾಣಿ, ರಾಜೇಶ್ ಕಾಶಿಕಟ್ಟೆ, ಸುರೇಶ್ ಉಜಿರಡ್ಕ,ಸನತ್ಕುಮಾರ್.ಸಿ.ಭಟ್, ನವೀನ್ ಮಣಿ, ರವಿ ಕಕ್ಕೆಪದವು, ಮಹಾಬಲ ರೈ, ರಾಜೇಶ್ ಕುಲ್ಕುಂದ, ಜಯಪ್ರಕಾಶ್ ಜಾಡಿಮನೆ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.









