ವರದಿ:ರತ್ನಾಕರ ಸುಬ್ರಹ್ಮಣ್ಯ
ಸುಬ್ರಹ್ಮಣ್ಯ: ಇತಿಹಾಸ ಪ್ರಸಿದ್ದ ಕುಲ್ಕುಂದ ಜಾನುವಾರು ಜಾತ್ರೆ ಪ್ರಯುಕ್ತ ಮಹತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಹಕಾರದಿಂದ ಐತಿಹಾಸಿಕ ಕುಲ್ಕುಂದ ಬಸವನಮೂಲೆಯ ಶ್ರೀ ಬಸವೇಶ್ವರ ದೇವಾಲಯದಲ್ಲಿ ಗೋಪೂಜೆ ನಡೆಯಿತು.ಈ ಮೂಲಕ ಐತಿಹಾಸಿಕ ಜಾನುವಾರು ಜಾತ್ರೆಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು. ಕಾರ್ತಿಕ ಹುಣ್ಣಿಮೆಯ ದಿನವಾದ ಸೋಮವಾರ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ
ಗೋವುಗಳಿಗೆ ಪುಷ್ಪಾಲಂಕಾರ ಮಾಡಿ ಕರೆತರಲಾಯಿತು. ಬಸವೇಶ್ವರ ದೇವಳದ ಪ್ರಧಾನ ಅರ್ಚಕ ಗಣೇಶ್ ದೀಕ್ಷಿತ್ ವಿವಿಧ ವೈದಿಕ ವಿದಿ ವಿಧಾನಗಳ ಮೂಲಕ ಗೋವುಗಳಿಗೆ ಗೋಪೂಜೆ ನೆರವೇರಿಸಿ, ಗೋಗ್ರಾಸ ನೀಡಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪುರೋಹಿತ ರಾಮಕೃಷ್ಣ ಭಟ್ ದೇವರಗದ್ದೆ ಸಹಕರಿಸಿದರು.
ಗೋಪೂಜೆ ಮೂಲಕ ಸಾಂಕೇತಿಕವಾಗಿ ಇತಿಹಾಸ ಪ್ರಸಿದ್ಧ ಕುಲ್ಕುಂದ ಜಾನುವಾರು ಜಾತ್ರೆಯನ್ನು ಆಚರಿಸಲಾಯಿತು. ಸುಮಾರು 400 ವರ್ಷಗಳಿಗಿಂತ ಹೆಚ್ಚು ಇತಿಹಾಸ ಇರುವ ಕುಲ್ಕುಂದ ಜಾನುವಾರು ಜಾತ್ರೆ ಹಿಂದೆಲ್ಲಾ ಒಂದು ತಿಂಗಳ ಕಾಲ ನಡೆಯುತ್ತಿತ್ತು. ಬಳಿಕ ಕೆಲವು ವರ್ಷಗಳ ಹಿಂದೆ 15 ದಿನಗಳ ಕಾಲ ನಡೆದಿತ್ತು. ಇದೀಗ ಕೆಲವು ವರ್ಷಗಳಿಂದ ಗತ ಕಾಲದ ಇತಿಹಾಸ ನೆನಪಿಸಿ ಕುಲ್ಕುಂದದಲ್ಲಿ ಗೋಪೂಜೆ ನಡೆಸಿ ಸಾಂಕೇತಿಕವಾಗಿ ಜಾನುವಾರು ಜಾತ್ರೆ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಬಸವೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ
ಅಧ್ಯಕ್ಷ ಗಿರಿಧರ ಸ್ಕಂದ, ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವನಜಾ.ವಿ.ಭಟ್, ಶೋಭಾ ಗಿರಿಧರ್, ಬಸವೇಶ್ವರ ದೇವಳದ ಆಡಳಿತ ಮಂಡಳಿ ಕಾರ್ಯದರ್ಶಿ ಚಂದ್ರಶೇಖರ ಬಸವನಮೂಲೆ, ಪ್ರಮುಖರಾದ ರಾಜೇಶ್ ಕುಲ್ಕುಂದ, ಮನೋಜ್ ಸುಬ್ರಹ್ಮಣ್ಯ, ಶ್ರೀಕುಮಾರ್ ಬಿಲದ್ವಾರ, ಸೋಮಸುಂದರ ಶೆಟ್ಟಿ ಕುಲ್ಕುಂದ, ಕಿರಣ್ ಟೈಲರ್, ಲೋಕೇಶ್.ಬಿ., ಗಿರೀಶ್ ಆಚಾರ್ಯ, ಗುಡ್ಡಪ್ಪ ಗೌಡ ಬೀಡಿನಗದ್ದೆ, ವಿಕಾಸ್ ಕುಲ್ಕುಂದ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.







