ಕುಕ್ಕೇಟ್ಟಿ: ಮಂಡೆಕೋಲು ಗ್ರಾಮದ ಕುಕ್ಕೇಟಿ ತರವಾಡು ಮನೆಯಲ್ಲಿ ಕುಕ್ಕೇಟಿ ತರವಾಡು ಮನೆಯಲ್ಲಿ ಭಕ್ತಿ ಸಂಭ್ರಮದ ಶ್ರೀ ಧರ್ಮದೈವ, ವಿಷ್ಣುಮೂರ್ತಿ ಧರ್ಮ ನಡಾವಳಿ ನಡೆಯಿತು.
ಫೆಬ್ರವರಿ 13 ಮತ್ತು 14 ರಂದು ಎರಡು ದಿನಗಳ ಕಾಲ ಶ್ರೀ ವೆಂಕಟರಮಣ ದೇವರ ಹರಿಸೇವೆ ಶ್ರೀ ಧರ್ಮದೈವ, ಶ್ರೀ ವಿಷ್ಣುಮೂರ್ತಿ, ಶ್ರೀ ಮುನಿಸ್ವಾಮಿ ಹಾಗೂ
ಉಪದೈವಗಳ ಧರ್ಮ ನಡಾವಳಿ ನಡೆಯಿತು. ಫೆಬ್ರವರಿ 13ರಂದು ಬೆಳಿಗ್ಗೆ ಗಂ.6:00 ರಿಂದ ಗಣಪತಿ ಹವನ, ನಾಗತಂಬಿಲ, ಮೂಲ ಸ್ಥಾನದಲ್ಲಿ ತಂಬಿಲ, ಶ್ರೀ ವೆಂಕಟರಮಣ ದೇವರ ಹರಿ ಸೇವೆ, ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಬಳಿಕ
ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ಸಂಜೆ ಶ್ರೀ ದೇವತೆ ದೈವದ ಕೋಲ, ಶ್ರೀ ವಿಷ್ಣುಮೂರ್ತಿ ದೈವದ ತೊಡಂಙಲ್, ಶ್ರೀ ರಕ್ತೇಶ್ವರಿ ದೈವದ ತೊಡಂಙಲ್, ರಾತ್ರಿ ವರ್ಣಾರ ಪಂಜುರ್ಲಿ ದೈವ ಹಾಗೂ ಪೊಟ್ಟನ್ ದೈವಗಳ ಕೋಲ ನಡೆಯಿತು.

ಫೆಬ್ರವರಿ 14ರಂದು ಬೆಳಿಗ್ಗೆ ಶ್ರೀ ರಕ್ತೇಶ್ವರಿ ದೈವದ ಕೋಲ ಹಗಲು ಶ್ರೀ ಧರ್ಮದೈವ ಮತ್ತು ಶ್ರೀ ವಿಷ್ಣುಮೂರ್ತಿ ದೈವಗಳ ನಡಾವಳಿ ನಡೆಯಿತು. ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು. ಸಂಜೆ ಕುಪ್ಪೆ ಪಂಜುರ್ಲಿ ದೈವ, ಪಾಷಾಣಮೂರ್ತಿ, ಕೊರತಿ, ಅಂಗಾರ, ಗುಳಿಗ ದೈವಗಳ ಕೋಲ ನಡೆದು ನಡಾವಳಿ ನಡೆಯಿತು. ಕುಕ್ಕೇಟಿ ಕುಟುಂಬದ ಯಜಮಾನ ಕುಕ್ಕೇಟಿ ಲಕ್ಷ್ಮಣ ಗೌಡ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕುಕ್ಕೇಟ್ಟಿ ಕುಶಾಲಪ್ಪ ಗೌಡ, ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು, ಕುಟುಂಬಸ್ಥರು ಉಪಸ್ಥಿತರಿದ್ದರು. ಸಾವಿರಾರು ಮಂದಿ ಆಗಮಿಸಿ ದೈವಗಳ ಅನುಗ್ರಹ ಪಡೆದು ಪ್ರಸಾದ ಸ್ವೀಕರಿಸಿದರು.









