ಸುಬ್ರಹ್ಮಣ್ಯ: ಅ.25ರಂದು ಸೂರ್ಯ ಗ್ರಹಣದ ಹಿನ್ನೆಲೆಯಲ್ಲಿ ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ದೇವರ ದರುಶನಕ್ಕೆ ಅವಕಾಶ ಕಲ್ಪಿಸಲಾಗಿದೆ.ಆದರೆ ಯಾವುದೇ ಸೇವೆಗಳು ನೆರವೇರುವುದಿಲ್ಲ ಮತ್ತು ಬೋಜನ ಪ್ರಸಾದ
ವಿತರಣೆಯೂ ಇರುವುದಿಲ್ಲ ಎಂದು ದೇವಳದ ಪ್ರಕಟಣೆ ತಿಳಿಸಿದೆ. ಅ.25ರಂದು ಮಂಗಳವಾರ ಬೆಳಗ್ಗೆ 7 ರಿಂದ 8.30ರ ತನಕ 10.30ರಿಂದ ಮದ್ಯಹ್ನ 1ರ ತನಕ ಹಾಗೂ ಗ್ರಹಣದ ಸಮಯವಾದ 5.11ರಿಂದ 6.28ರ ತನಕ ಶ್ರೀ ದೇವರ ದರುಶನಕ್ಕೆ ಅವಕಾಶ ಕಲ್ಪಿಸಲಾಗಿದೆ.ನಂತರ ದರುಶನಕ್ಕೆ ಅವಕಾಶ ಇರುವುದಿಲ್ಲ. ಅ.26ರಂದು ಮುಂಜಾನೆ ದೇವಳದಲ್ಲಿ ಶುದ್ದಿ ಕಾರ್ಯದ ಬಳಿಕ ಶ್ರೀ ದೇವರಿಗೆ ಮುಂಜಾನೆ ನಡೆಯುವ ನಿತ್ಯದ ಪೂಜಾ ವಿದಿವಿಧಾನಗಳು ನೆರವೇರಿದ ನಂತರ ಸುಮಾರು ಬೆಳಗ್ಗೆ 9 ಗಂಟೆಯ ನಂತರ ದೇವರ ದರುಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.ಆ ಬಳಿಕ ಸೇವಾಧಿಗಳು ಆರಂಭಗೊಳ್ಳಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.