ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಬುಧವಾರ ಎರಡನೇ ದಿನವೂ ಸಂಜೆ ವೇಳೆ ಮಳೆಯಾಯಿತು.ಮಂಗಳವಾರಕ್ಕಿಂತ ಮಳೆ ಅಲ್ಪ ಬಿರುಸು ಪಡೆದಿತ್ತು. ಸುಮಾರು ಅರ್ಧ ತಾಸಿಗೂ ಅಧಿಕ ಸಮಯ

ಮಳೆಯಾಗಿದೆ. ಕುಕ್ಕೆ ಸುಬ್ರಹ್ಮಣ್ಯ, ಐನೆಕಿದು, ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರು, ಕಲ್ಮಕಾರು, ಬಳ್ಪ ಸೇರಿದಂತೆ ಪರಿಸರದ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲ ದಿನಗಳಿಂದ ಭಾರೀ ತಾಪಮಾನ ದಾಖಲಾಗಿತ್ತು. ಇದೀಗ ಮಳೆ ಸುರಿದು ಬಿಸಿಲಿನ ತಾಪಕ್ಕೆ ಬೆಂದು ಬರಡಾಗಿದ್ದ ಇಳೆಗೆ ತಂಪೆರೆದಿದೆ. ಸೆಕೆಯಲ್ಲಿ ಬಸವಳಿದ ಜನತೆಗೂ ಮಳೆ ಸುರಿದಿರುವುದು ಖುಷಿ ಕೊಟ್ಟಿದೆ.