ಸುಬ್ರಹ್ಮಣ್ಯ: ಭಾರೀ ಮಳೆಯಿಂದಾಗಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ. ನದಿಯ ಪ್ರವಾಹದಿಂದ ಸ್ನಾನ ಘಟ್ಟ ಸೋಮವಾರ ಮುಳುಗಡೆಯಾಗಿದೆ.ಯಾತ್ರಾರ್ಥಿಗಳಿಗೆ ತೀರ್ಥಸ್ನಾನ ನೆರವೇರಿಸಲು ನದಿ ನೀರನ್ನು ಡ್ರಮ್ ಮೂಲಕ ಸಂಗ್ರಹಿಸಿ ಭಕ್ತರಿಗೆ ತೀರ್ಥಸ್ನಾನಕ್ಕೆ ಅವಕಾಶ ನೀಡಲಾಗಿದೆ. ನದಿ ತುಂಬಿ ಹರಿಯುತ್ತಿರುವ
ಹಿನ್ನೆಲೆಯಲ್ಲಿ ನದಿ ಪಾತ್ರಕ್ಕೆ ಭಕ್ತಾಧಿಗಳು ತೆರಳದಂತೆ ಕ್ಷೇತ್ರದ ವತಿಯಿಂದ ಸೂಚನೆ ನೀಡಲಾಗಿದೆ.ಸ್ನಾನಘಟ್ಟದ ಬಳಿ ಹೋಮ್ ಗಾರ್ಡ್ ಮತ್ತು ದೇವಸ್ಥಾನದ ಸೆಕ್ಯುರಿಟಿಗಳ ನೇಮಕಮಾಡಲಾಗಿದ್ದು, ಎಚ್ಚರಿಕೆ ವಹಿಸಲಾಗಿದೆ. ಇನ್ನು ಕುಮಾರಧಾರೆಯ ಉಪನದಿ ದರ್ಪಣ ತೀರ್ಥವೂ ತುಂಬಿ ಹರಿಯಿತ್ತಿದ್ದು, ಸಮೀಪದ ತಗ್ಗು ಪ್ರದೇಶ ಕೃಷಿ ತೋಟ ಜಲಾವೃತವಾಗಿದೆ.