ವರದಿ:ರತ್ನಾಕರ ಸುಬ್ರಹ್ಮಣ್ಯ.
ಸುಬ್ರಹ್ಮಣ್ಯ: ಡಿ.17 ಮತ್ತು 18ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ, ನಡೆಯುವ ವಾರ್ಷಿಕ ಚಂಪಾ ಷಷ್ಠಿ, ಜಾತ್ರೆ ಪುಯುಕ್ತ ಉತ್ಸವಕ್ಕೆ ಆಗಮಿಸುವ ಭಕ್ತಾಧಿಗಳು ವಾಹನ ಪಾರ್ಕಿಂಗ್ ಮಾಡಲು ಪೊಲೀಸ್ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಡಿ.17 ಸಂಜೆ 4 ಗಂಟೆಯಿಂದ ಡಿ.18 ಸಂಜೆ 4 ಗಂಟೆಯ ತನಕ
ಈ ಕೆಳಗಿನಂತೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಭಕ್ತಾದಿಗಳು ಮತ್ತು
ಸಳೀಯರು ಸಹಕರಿಸಬೇಕೆಂದು, ಸುಬ್ರಹ್ಮಣ್ಯ ಪೊಲೀಸ್ ಠಾಣಾಧಿಕಾರಿಯವರು ಪತ್ರಿಕಾ ಪ್ರಕಟಣಿಯಲ್ಲಿ ತಿಳಿಸಿರುತ್ತಾರೆ.
1.ಗುಂಡ್ಯ- ಉಪ್ಪಿನಂಗಡಿ- ಕಡಬ- ಪುತ್ತೂರು, ಕಡೆಯಿಂದ ಬರುವ ಕೆ.ಎಸ್.ಆರ್.ಟಿ.ಸಿ ಬಸ್ ಗಳಿಗೆ ಸುಬ್ರಹ್ಮಣ್ಯದ ವಲ್ಲೀಶ ಸಭಾ ಭವನದ ಬಳಿ. ಪಾರ್ಕಿಂಗ್ ಸ್ಥಳ
2) ಗುಂಡ್ಯ- ಉಪ್ಪಿನಂಗಡಿ- ಕಡಬ-ಪುತ್ತೂರು ಕಡೆಯಿಂದ ಬರುವ ಲಘು ವಾಹನಗಳಿಗೆ, ಕುಮಾರಧಾರ ಹೆಲಿಪ್ಯಾಡ್, ಮತ್ತು ಸುಬ್ರಹ್ಮಣ್ಯ ಪದವೀ ಪೂರ್ವ ಕಾಲೇಜು ಮೈದಾನ.
3) ಗುಂಡ್ಯ- ಉಪ್ಪಿನಂಗಡಿ- ಕಡಬ- ಪುತ್ತೂರು ಕಡೆಯಿಂದ ಬರುವ ದ್ವಿಚಕ್ರ ವಾಹನಗಳಿಗೆ ಸುಬ್ರಹ್ಮಣ್ಯ ಪದವೀ ಕಾಲೇಜು ಮೈದಾನ. ಮತ್ತು ಬಿಲದ್ವಾರದ ಎದುರಿನ ಮೈದಾನ,
4) ಸುಳ್ಯ ಕಡೆಯಿಂದ ಬರುವ ಕೆ.ಎಸ್.ಆರ್.ಟಿ.ಸಿ ಬಸ್ ಗಳಿಗೆ ಇಂಜಾಡಿ ಫಾರೆಸ್ಟ್ ವಸತಿ ಗೃಹದ ಬಳಿ ಮೈದಾನ.
5) ಸುಳ್ಯ ಕಡೆಯಿಂದ ಬರುವ ದ್ವಿಚಕ್ರವಾಹನಗಳಿಗೆ ಸುಬ್ರಹ್ಮಣ್ಯ ಸವಾರಿ ಮಂಟಪದ ಬಳಿ ಮೈದಾನ.
6) ಸುಳ್ಯ ಕಡೆಯಿಂದ ಬರುವ ಲಘುವಾಹನಗಳಿಗೆ ಸವಾರಿ ಮಂಟಪದ ಬಳಿ ಪಾರ್ಕಿಂಗ್ ಸ್ಥಳ
7) ರಿಕ್ಷಾ ಚಾಲಕರು ಪ್ರಯಾಣಿಕರನ್ನು ಕುಮಾರಧಾರದಿಂದ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಎದುರಿನ ತನಕ ಸಾಗಾಟ ಮಾಡಬಹುದಾಗಿದೆ.
ಡಿ.17 ರಂದು ಸಂಜೆ 4 ಗಂಟೆಯಿಂದ ಎಲ್ಲಾ ವಾಹನಗಳು ಸಂಬಂಧಿಸಿದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಬೇಕಾದುದುರಿಂದ ಲಾಡ್ಜ್ ಗಳಲ್ಲಿ ರೂಂ ಗಳನ್ನು ಕಾದಿರಿಸಿದವರು ಸಂಜೆ 04-00 ಗಂಟೆಯ ಒಳಗಡೆ ಸಂಬಂದಿಸಿದ ಲಾಡ್ಜ್ ಗಳಿಗೆ ಬರತಕ್ಕದ್ದು ಮತ್ತು ಕುಮಾರಧಾರದಿಂದ ಸವಾರಿ ಮಂಟಪದ ತನಕ ರಸ್ತೆಯ ಎರಡು ಬದಿಗಳಲ್ಲಿ ವಾಹನ ಪಾರ್ಕಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.










