ಸುಬ್ರಹ್ಮಣ್ಯ: ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ನಾಗಾರಾಧನೆಯ ಪುಣ್ಯ ತಾಣ ಮತ್ತು ರಾಜ್ಯದ ನಂಬರ್ ವನ್ ಆದಾಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರಕಾರದ ಆದೇಶದ ಪ್ರಕಾರ ಬುಧವಾರ ಸರಳ ಸಾಮೂಹಿಕ ವಿವಾಹ ಮಾಂಗಲ್ಯ ಭಾಗ್ಯ ನಡೆಯಿತು. ಬೆಳಗ್ಗೆ 11.20 ರಿಂದ 12.20 ಅಭಿಜಿನ್ ಲಗ್ನ ಸುಮುಹೂರ್ತದಲ್ಲಿ ವಿವಾಹ ನೆರವೇರಿತು.ಒಟ್ಟು 6 ಜೋಡಿಗಳು ಸಪ್ತಪದಿ ತುಳಿದರು.ಶ್ರೀ ದೇವಳದ ಆದಿಸುಬ್ರಹ್ಮಣ್ಯ ಕಲ್ಯಾಣ
ಮಂಟಪದಲ್ಲಿ ನಡೆದ ಸರಳ ಸಾಮೂಹಿಕ ವಿವಾಹದಲ್ಲಿ ಶ್ರೀ ದೇವಳದ ಪುರೋಹಿತರು ವಿವಾಹದ ವಿದಿ ವಿಧಾನಗಳನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ,ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶ್ರೀವತ್ಸಾ ಬೆಂಗಳೂರು,ಪ್ರಸನ್ನ ದರ್ಬೆ, ಪಿಜಿಎಸ್ಎನ್ ಪ್ರಸಾದ್, ಮನೋಹರ ರೈ, ಶೋಭಾಗಿರಿಧರ್, ವನಜಾ.ವಿ.ಭಟ್, ನಿಕಟಪೂರ್ವ ತಾ.ಪಂ.ಸದಸ್ಯ ಅಶೋಕ್ ನೆಕ್ರಾಜೆ, ಶ್ರೀ ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ದೇವಳದ ಸಿಬ್ಬಂದಿಗಳಾದ ಶಿವಸುಬ್ರಹ್ಮಣ್ಯ ಭಟ್,ಮಹಾಬಲೇಶ್ವರ ದೋಳ, ಯೋಗೀಶ್.ಎಂ.ವಿಟ್ಲ, ಮೋಹನ್ ಎಂ.ಕೆ, ಶ್ರೀಮಂತ ಜೋಳದಪ್ಪಗೆ, ದಾಮೋದರ ದೇವರಗದ್ದೆ ಸೇರಿದಂತೆ ವಧು ವರರ ಕುಟುಂಬಸ್ಥರು, ಭಕ್ತರು ಉಪಸ್ಥಿತರಿದ್ದು ವಧು ವರರನ್ನು ಹಾರೈಸಿದರು.








