ಸುಬ್ರಹ್ಮಣ್ಯ:ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಚಂಪಾ ಷಷ್ಠಿ ಮಹೋತ್ಸವದ ಪೂರ್ವ ಸಿದ್ಧತಾ ಸಭೆ ನ.20 ರಂದು ನಡೆಯಿತು. ಜಾತ್ರೋತ್ಸವದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಸಿದ್ಧತೆಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಪಾರ್ಕಿಂಗ್, ಲಕ್ಷದೀಪೋತ್ಸವ, ಕುಣಿತ ಭಜನೆ, ಬ್ರಹ್ಮರಥೋತ್ಸವ ಪಾಸ್, ಕೃಷಿ ಸ್ಟಾಲ್, ಸಿಡಿ ಮದ್ದು ಪ್ರದರ್ಶನ ಕುರಿತ ಸಿದ್ಧತೆ ಬಗ್ಗೆ ಚರ್ಚಿಸಲಾಯಿತು. ಉತ್ಸವಕ್ಕಾಗಿ ಎಲ್ಲಾ ಸಿದ್ಧತೆಗಳನ್ನು
ನಡೆಸುವಂತೆ ಸಭೆ ಸೂಚಿಸಿತು. ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ಆಡಳಿತಾಧಿಕಾರಿ ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮಹಾಪಾತ್ರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಸುಳ್ಯ ತಹಶಿಲ್ದಾರ್ ಮಂಜುಳಾ, ಕಡಬ ತಹಶಿಲ್ದಾರ ಪ್ರಭಾಕರ ಕಜೂರೆ, ಆರ್ ಎಫ್. ಒ ವಿಮಲ್ ಬಾಬು, ಕಡಬ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಂಡಾರಿ, ಕೆ.ಎಸ್ಆರ್.ಟಿ.ಸಿಯ ವೇಣುಗೋಪಾಲ್,ಸುಬ್ರಹ್ಮಣ್ಯ
ಗ್ರಾ.ಪಂ ಅಧ್ಯಕ್ಷೆ ಸುಜಾತ ಕಲ್ಲಾಜೆ, ಸರ್ಕಲ್ ಇನ್ಸ್ ಪೆಕ್ಟರ್ ತಿಮ್ಮಪ್ಪ ನಾಯ್ಕ್, ಸಹಾಯಕ ಉಪ ನೀರಿಕ್ಷರಾದ ಕಾರ್ತಿಕ್ , ಮಾಸ್ಟರ್ ಪ್ಲಾನ್ ಸದಸ್ಯರಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಎಂ.ಡಿ.ಪವನ್, ಅಚ್ಚುತ ಆಲ್ಕಬೆ, ಡಾ. ತ್ರೀಮೂರ್ತಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇಂಜಿನಿಯರ್ ಉದಯಕುಮಾರ್ ಸ್ವಾಗತಿಸಿ, ಮಹೇಶ್ ವಂದಿಸಿದರು. ಸಭೆಯಲ್ಲಿ ಶಿವರಾಮ ರೈ, ರಾಜೇಶ್ ಎನ್.ಎಸ್, ಅಶೋಕ್ ನೆಕ್ರಾಜೆ, ವಿಮಲಾ ರಂಗಯ್ಯ, ಹರೀಶ್ ಇಂಜಾಡಿ, ಅಚ್ಚುತ ಗೌಡ, ಮಾದವ ದೇವರಗದ್ದೆ, ಕಿಶೋರ್ ಅರಂಪಾಡಿ,
ನಾರಾಯಣ ಅಗ್ರಹಾರ, ವಿಶ್ವನಾಥ ನಡುತೋಟ ಮತ್ತಿತರು ಚರ್ಚೆಯಲ್ಲಿ ಪಾಲ್ಗೊಂಡರು.