ಸುಬ್ರಹ್ಮಣ್ಯ: ಸರಕಾರ ಮತ್ತು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರ ಆದೇಶದಂತೆ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ದಲ್ಲಿ ದೀಪಾವಳಿಯ ಬಲಿಪಾಡ್ಯಮಿ ದಿನದಂದು ಗೋಪೂಜೆ ನೆರವೇರಿತು.ಕ್ಷೇತ್ರ ಪುರೋಹಿತ ಮದುಸೂಧನ ಕಲ್ಲೂರಾಯರು ವಿವಿಧ ವೈದಿಕ ವಿಧಾನಗಳ ಮೂಲಕ ಪೂಜೆ ನೆರವೇರಿಸಿದರು. ಗೋವುಗಳಿಗೆ ಸ್ನಾನ ಮಾಡಿಸಿ ಅರಿಶಿನ
ಕುಂಕುಮ , ಹೂವುಗಳಿಂದ ಅಲಂಕರಿಸಿ ಶ್ರೀ ದೇವಳದ ಮುಂಭಾಗಕ್ಕೆ ತರಲಾಯಿತು. ಇಲ್ಲಿ ಅಕ್ಕಿ , ಬೆಲ್ಲ , ಸಿಹಿ ತಿನಿಸುಗಳನ್ನು ಒಳಗೊಂಡ ಗೋಗ್ರಾಸ ನೀಡಲಾಯಿತು. ನಂತರ ವಿವಿಧ ವೈಧಿಕ ವಿದಿ ವಿಧಾನಗಳೊಂದಿಗೆ ಪುರೋಹಿತರು ಪೂಜಾದಿಗಳನ್ನು ನೆರವೇರಿಸಿದರು.ಇದಲ್ಲದೆ ಪೂರ್ವಶಿಷ್ಠ ಸಂಪ್ರದಾಯದ ಪ್ರಕಾರ ಪ್ರತಿವರ್ಷದಂತೆ ದೇವಳದ ಗೋಶಾಲೆಯಲ್ಲಿ ಕೂಡಾ ಪೂಜೆ ನೆರವೇರಿತು. ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವನಜಾ ವಿ ಭಟ್, ಶ್ರೀವತ್ಸ ಬೆಂಗಳೂರು, ಶೋಭಾ ಗಿರಿಧರ್, ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಶಿಷ್ಠಾಚಾರ ಅಧಿಕಾರಿ ಜಯರಾಮ ರಾವ್, ಪಾಟಾಳಿ ಶಿವಪ್ರಸಾದ್ ಸಿ.ಎಸ್, ಶ್ರೀ ದೇವಳದ ಶಿವಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.