ಚಿತ್ರಗಳು:ಪ್ರಕಾಶ್ ಸುಬ್ರಹ್ಮಣ್ಯ.
ಸುಬ್ರಹ್ಮಣ್ಯ: ಕುಕ್ಕೆಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವ ಅಂಗವಾಗಿ ಬುಧವಾರ ಬೆಳಿಗ್ಗೆ ವೈಭವದ ಬ್ರಹ್ಮ ರಥೋತ್ಸವ ನಡೆಯಿತು. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಸಹಸ್ರಾರು ಮಂದಿ ಭಕ್ತರು ರಥೋತ್ಸವವವನ್ನು ಕಣ್ತುಂಬಿಕೊಂಡರು. ಇಂದು ಬೆಳಿಗ್ಗೆ

7.29ರ ವೃಶ್ಚಿಕ ಲಗ್ನ ಸುಮುಹೂರ್ತದಲ್ಲಿ ನಡೆದ ಬ್ರಹ್ಮ ರಥೋತ್ಸವದ ವೈಭವವನ್ನು ಪತ್ರಕರ್ತ ಹಾಗೂ ಛಾಯಾಚಿತ್ರ ಗ್ರಾಹಕರಾದ ಪ್ರಕಾಶ್ ಸುಬ್ರಹ್ಮಣ್ಯ ಅವರು ಆಕರ್ಷಕವಾಗಿ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಅವರು ಕ್ಲಿಕ್ಕಿಸಿದ ಕೆಲವು ಚಿತ್ರಗಳು ಇಲ್ಲಿದೆ. ಪ್ರತಿರೂಪ ಡಿಜಿಟಲ್ ಸ್ಟುಡಿಯೋದ ಮಾಲಕರೂ ಆದ ಪ್ರಕಾಶ್ ಕ್ಲಿಕ್ಕಿಸಿದ ಆಕರ್ಷಕ ಚಿತ್ರಗಳನ್ನು ಸುಳ್ಯ ಮಿರರ್ ಡಿಜಿಟಲ್ ಮಾಧ್ಯಮದ ಓದುಗರಿಗಾಗಿ ಪ್ರಕಟಿಸುತ್ತಿದ್ದೇವೆ.







ಚಿತ್ರ












