ಸುಬ್ರಹ್ಮಣ್ಯ: ಮಹಾತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷ್ಠಿ ಜಾತ್ರೋತ್ಸವದ ಪ್ರಯುಕ್ತ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಜನೋತ್ಸವ ಆದಿತ್ಯವಾರ ನಡೆಯಿತು. ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯ ತನಕ ಭಜನೆ ನೆರವೇರಿತು. ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಭಜನೋತ್ಸವವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ದೇವಳದ
ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೋಭಾ ಗಿರಿಧರ್,ವನಜಾ.ವಿ.ಭಟ್, ಎಸ್ಎಸ್ಪಿಯು ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯಗುರು ಕೆ.ಯಶವಂತ ರೈ, ಶ್ರೀ ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್,ಶಿಷ್ಠಾಚಾರ ಅಧಿಕಾರಿ ಜಯರಾಮ ರಾವ್, ಆರೋಗ್ಯ ನಿರೀಕ್ಷಕ ಯೋಗೀಶ್.ಎಂ. ವಿಟ್ಲ, ಗ್ರಾ.ಪಂ.ಸದಸ್ಯ ಗಿರೀಶ್ ಆಚಾರ್ಯ ಪೈಲಾಜೆ, ಕಲಾವಿದರಾದ ಗಣೇಶ್ ಪರ್ವತಮುಖಿ, ಯೋಗೀಶ್, ಶ್ರೀ ದೇವಳದ ರಾಜಲಕ್ಷ್ಮಿ ಶೆಟ್ಟಿಗಾರ್, ರೋಹಿತಾಕ್ಷಿ, ಭಾನುಮತಿ, ಬಾಲಕೃಷ್ಣ.ಆರ್, ಸಂದೇಶ್ ನಾಯಕ್, ಅಶೋಕ್ ಅತ್ಯಡ್ಕ ಸೇರಿದಂತೆ ದೇವಳದ ಸಿಬ್ಬಂಧಿಗಳು, ಭಕ್ತರು ಉಪಸ್ಥಿತರಿದ್ದರು.
ಬಳಿಕ ವಿವಿಧ ತಂಡಗಳಿಂದ ಭಜನೆ ಆರಂಭಗೊಂಡಿತು. ಶ್ರೀ ದೇವಳದ ನೌಕರರ ವೃಂದ, ವಿದ್ಯಾಸಾಗರ ಭಜನಾ ಮಂಡಳಿ ಸುಬ್ರಹ್ಮಣ್ಯ, ಬಸವೇಶ್ವರ ಭಜನಾ ಮಂಡಳಿ ಕುಲ್ಕುಂದ, ಶ್ರೀವಲ್ಲಿ ಭಜನಾ ಮಂಡಳಿ ಸುಬ್ರಹ್ಮಣ್ಯ, ಉಮಾಮಹೇಶ್ವರ ಭಜನಾ ಮಂಡಳಿ ಮಲೆಂಗಲ್ಲು, ಸಂಕೀರ್ತನ ಭಜನಾ ಮಂಡಳಿ ಮೂಡಬಿದ್ರೆ, ಶ್ರೀ ದೇವಿ ಭಜನಾ ಮಂಡಳಿ ಮೆಟ್ಟಿನಡ್ಕ, ಸಿಂಧೂರ ಮಹಿಳಾ ಭಜನಾ ಮಂಡಳಿ ಪಾಣಾಜೆ, ದೀಪಾಂಜಲಿ ಮಹಿಳಾ ಭಜನಾ ಮಂಡಳಿ ಶಾಂತಿನಗರ, ಸಿದ್ಧಿವಿನಾಯಕ ಭಜನಾ ಮಂಡಳಿ ಬೀದಿಗುಡ್ಡೆ, ರವಿ ದೇವಾಡಿಗ ಮತ್ತು ಬಳಗ ಕಡಬ, ಶ್ರೀ ದುರ್ಗಾ ಭಜನಾ ಮಂಡಳಿ ಮರಕತ, ಯಜ್ಞೇಶ್ ಆಚಾರ್ ಮತ್ತು ಬಳಗ, ಕುಕ್ಕೆಶ್ರೀ ಭಜನಾ ಮಂಡಳಿ ಸುಬ್ರಹ್ಮಣ್ಯ, ಗೋಪಾಲಕೃಷ್ಣ ಭಜನಾ ಮಂಡಳಿ ಬಿಳಿನೆಲೆಯ ಸದಸ್ಯರು ಭಜನಾ ಸೇವೆ ನೆರವೇರಿಸಿದರು. ಭಜನೆ ನೆರವೇರಿಸಿದ ತಂಡದ ಎಲ್ಲಾ ಸದಸ್ಯರಿಗೆ ಕುಕ್ಕೆ ದೇವಳದಿಂದ ಶಾಲು ಹೊದಿಸಿ ದೇವರ ಪ್ರಸಾದ ನೀಡಲಾಯಿತು.









