ಸುಳ್ಯ:ಕುಕ್ಕನ್ನೂರು ಉಳ್ಳಾಕುಲ ಮೂಲ ಸ್ಥಾನ (ಕುದುರೆ ಕುಂಞನ ಕೊಟ್ಟಿಗೆ) ಇದರ ಜೀರ್ಣೊದ್ಧಾರಕ್ಕೆ ಸಂಬಂಧಿಸಿದ ಮುಹೂರ್ತದ ಮರ ಡಿ.25 ರಂದು ಕಡಿಯಲಾಗಿತ್ತು. ಇದರ ಸಲುವಾಗಿ ಮರದ ಶಿಲ್ಪಿಗಳ ಕೆಲಸ ಕಾರ್ಯಗಳು ಮುಂದಿನ ದಿನಗಳಲ್ಲಿ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಕುಕ್ಕನ್ನೂರಿನ ಭಕ್ತಾಭಿಮಾನಿಗಳು ಅಲ್ಲಿ ಸೇರಿ ಒಂದು ದಿನದ ಶ್ರಮದಾನದ ಮೂಲಕ ಚಪ್ಪರ ಹಾಕಿಕೊಟ್ಟರುಎಂದು ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಬಾಲಕೃಷ್ಣ ಗೌಡ. ಎನ್.ಎಸ್. ನಡುಬೆಟ್ಟು ತಿಳಿಸಿದ್ದಾರೆ.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.
previous post