ಸುಳ್ಯ:ಶ್ರೀ ಕುಡೆಕಲ್ಲು ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಶ್ರೀ ವಿಷ್ಣುಮೂರ್ತಿ ದೈವ ಹಾಗೂ ಉಪದೈವಗಳ ಕಳಿಯಾಟ ಮಹೋತ್ಸವ ಮಾ.24ರಿಂದ 26ರ ತನಕ ನಡೆಯಲಿದೆ. ಮಾ.17 ರಂದು ಕಳಿಯಾಟಕ್ಕೆ ಗೊನೆ ಮುಹೂರ್ತ ನಡೆಯಿತು.ಮಾ.24 ಮಂಗಳವಾರ ಬೆಳಿಗ್ಗೆ 8ರಿಂದ ಗಣಪತಿ ಹವನ, ನಾಗತಂಬಿಲ ನಡೆಯಲಿದೆ.ರಾತ್ರಿ 8ಕ್ಕೆ ಕಳಿಯಾಟಕ್ಕೆ
ಕೂಡುವುದು. ರಾತ್ರಿ 8-30ಕ್ಕೆ ಉಗ್ರಾಣ ತುಂಬಿಸುವುದು, ರಾತ್ರಿ 9ಕ್ಕೆ ಕೈವೀದ್ ನಡೆಯಲಿದೆ.ರಾತ್ರಿ 9-30ಕ್ಕೆ ಶ್ರೀ ವಯನಾಟ್ ಕುಲವನ್ ದೈವಸ್ಥಾನದಿಂದ ಕಲಶ ತರಲಾಗುವುದು. ರಾತ್ರಿ10ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಕುಲ್ಚಾಟ ಮತ್ತು ಗುರುಕಾರ್ಣೋರು ದೈವ ನಡೆಯಲಿದೆ.ಮಾ.25 ಬುಧವಾರ ಪೂ.8ಕ್ಕೆ ಶ್ರೀ ಪೊಟ್ಟ,ನ್ ದೈವ ಅಪರಾಹ್ನ 3ಕ್ಕೆ ಶ್ರೀ ರಕ್ತೇಶ್ವರಿ ದೈವ, ಸಂಜೆ 5ಕ್ಕೆ ಶ್ರೀ ಪಿಲಿಭೂತ ರಾತ್ರಿ 8-30ರಿಂದ ಶ್ರೀ ವಿಷ್ಣುಮೂರ್ತಿ, ಶ್ರೀ ಧರ್ಮದೈವ, ಶ್ರೀ ಪಾಷಾಣಮೂರ್ತಿ ದೈವಗಳ ಕೋಲಗಳು ನಡೆಯಲಿದೆ.

ರಾತ್ರಿ 11ಕ್ಕೆ ಶ್ರೀ ದೈವದ ಕಲಶ ತೆಗೆಯುವುದು ನಂತರ ಹರಿಕೆ-ಪ್ರಸಾದ, ತುಲಾಭಾರ ಸೇವೆ ನಡೆಯಲಿದೆ.ಮಾ.26 ಗುರುವಾರ ಸಂಜೆ 4ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಕುಲ್ಚಾಟ, ರಾತ್ರಿ 9ರಿಂದ ಶ್ರೀ ವಿಷ್ಣುಮೂರ್ತಿ, ಶ್ರೀ ಧರ್ಮದೈವ, ಶ್ರೀ ಪಾಷಾಣಮೂರ್ತಿ ದೈವಗಳು ರಾತ್ರಿ 11ರಿಂದ ಶ್ರೀ ದೈವದ ಕಲಶ ತೆಗೆಯುವುದು ನಂತರ ಹರಿಕೆ-ಪ್ರಸಾದ, ತುಲಾಭಾರ ಸೇವೆ ನಡೆಯಲಿದೆ. ಕಳಿಯಾಟ ದಿನಗಳಲ್ಲಿ ಅನ್ನದಾನ ನಡೆಯಲಿದೆ.
ಸಾರ್ವಜನಿಕರು ಕಳಿಯಾಟ ಮಹೋತ್ಸವದಲ್ಲಿ ಭಾಗವಹಿಸಿ ದೈವಗಳ ಸೇವೆಯಲ್ಲಿ ಪಾಲ್ಗೊಂಡು ಪ್ರಸಾದವನ್ನು ಸ್ವೀಕರಿಸಿ, ದೈವಗಳ ಕೃಪೆಗೆ ಪಾತ್ರರಾಗಬೇಕು ಎಂದು ದೈವಸ್ಥಾನದ ಆಡಳ್ತೆದಾರರಾದ ಬಿಪಿನ್ ಕುಡೆಕಲ್ಲು ವಿನಂತಿಸಿದ್ದಾರೆ.















