ಸುಳ್ಯ:ಶ್ರೀ ಕುಡೆಕಲ್ಲು ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಶ್ರೀ ವಿಷ್ಣುಮೂರ್ತಿ ದೈವ ಹಾಗೂ ಉಪದೈವಗಳ ಕಳಿಯಾಟ ಮಹೋತ್ಸವ ಮಾ.24ರಿಂದ ಆರಂಭಗೊಂಡಿದ್ದು ಇಂದು ಸಮಾಪನಗೊಳ್ಳಲಿದೆ. ಮಂಗಳವಾರ ರಾತ್ರಿ ಕಳಿಯಾಟ ಆರಂಭಗೊಂಡು ಉಗ್ರಾಣ ತುಂಬಿಸುವುದು,ಕೈವೀದ್ ನಡೆಯಿತು.ಶ್ರೀ ವಯನಾಟ್ ಕುಲವನ್ ಬಳಿಕ ದೈವಸ್ಥಾನದಿಂದ

ಕಲಶ ತರಲಾಯಿತು. ರಾತ್ರಿ ಶ್ರೀ ವಿಷ್ಣುಮೂರ್ತಿ ದೈವದ ಕುಲ್ಚಾಟ ಮತ್ತು ಗುರುಕಾರ್ಣೋರು ದೈವ ನಡೆಯಿತು. ಮಾ.25 ಬುಧವಾರ ಪೂರ್ವಾಹ್ನ ಶ್ರೀ ಪೊಟ್ಟ,ನ್ ದೈವ ಅಪರಾಹ್ನ ಶ್ರೀ ರಕ್ತೇಶ್ವರಿ ದೈವ, ಸಂಜೆ ಶ್ರೀ ಪಿಲಿಭೂತ ರಾತ್ರಿ ಶ್ರೀ ವಿಷ್ಣುಮೂರ್ತಿ, ಶ್ರೀ ಧರ್ಮದೈವ, ಶ್ರೀ ಪಾಷಾಣಮೂರ್ತಿ ದೈವಗಳ ಕೋಲಗಳು ನಡೆಯಿತು.
ರಾತ್ರಿ ಶ್ರೀ ದೈವದ ಕಲಶ ತೆಗೆದು ನಂತರ ಹರಿಕೆ-ಪ್ರಸಾದ, ತುಲಾಭಾರ ಸೇವೆ ನಡೆಯಿತು. ಇಂದು (ಮಾ.26 ಗುರುವಾರ)

ಸಂಜೆ 4ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಕುಲ್ಚಾಟ, ರಾತ್ರಿ 9ರಿಂದ ಶ್ರೀ ವಿಷ್ಣುಮೂರ್ತಿ, ಶ್ರೀ ಧರ್ಮದೈವ, ಶ್ರೀ ಪಾಷಾಣಮೂರ್ತಿ ದೈವಗಳು ನಡೆಯಲಿದೆ.
ರಾತ್ರಿ 11ರಿಂದ ಶ್ರೀ ದೈವದ ಕಲಶ ತೆಗೆಯುವುದು ನಂತರ ಹರಿಕೆ-ಪ್ರಸಾದ, ತುಲಾಭಾರ ಸೇವೆ ನಡೆಯಲಿದೆ. ಕಳಿಯಾಟ ದಿನಗಳಲ್ಲಿ ಅನ್ನದಾನ ನಡೆಯುತಿದೆ. ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಮಂದಿ ಆಗಮಿಸಿ ದೈವಗಳ ಆಶೀರ್ವಾದ ಪಡೆದರು.











