ಮಂಗಳೂರು:ಮಂಗಳೂರು ವಿಭಾಗದಿಂದ’ ದಸರಾ ಆಯೋಜಿಸಿ ಪ್ಯಾಕೇಜ್ ‘ ಯಶಸ್ವಿಯಾದ ಕೆಎಸ್ಆರ್ಟಿಸಿ ಇದೀಗ ಆರು ವಿಭಾಗದಲ್ಲಿ ದೀಪಾವಳಿ ಪ್ಯಾಕೇಜ್ ಪ್ರವಾಸ ಘೋಷಣೆ ಮಾಡಿದೆ.ಅ.21 ರಿಂದ ಅ.31 ರವರೆಗೆ ಮಂಗಳೂರು ವಿಭಾಗದಿಂದ ದಕ್ಷಿಣ ಕನ್ನಡ ಜಿಲ್ಲೆ ನೆರೆಯ ಜಿಲ್ಲೆಯ ನಾನಾ ದೇವಸ್ಥಾನ , ಪ್ರೇಕ್ಷಣೀಯ ಸ್ಥಳಗಳಿಗೆ ಒಂದು ದಿನದ ಪ್ಯಾಕೇಜ್ ಪ್ರವಾಸ ಕಾರ್ಯಾಚರಣೆ ಆಯೋಜಿಸಲಾಗಿದೆ. ಈ ಪ್ಯಾಕೇಜ್ ಪ್ರವಾಸಕ್ಕೆ
ಆನ್ಲೈನ್ ಮುಂಗಡ ಬುಕ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ.ಬೆಳಗ್ಗೆ 8 ಗಂಟೆಗೆ ಬಸ್ ನಿಲ್ದಾಣಗಳಿಂದ ಹೊರಡಲಿದೆ . ಮಂಗಳೂರು – ಮಡಿಕೇರಿ ಪ್ಯಾಕೇಜ್ : ರಾಜಸೀಟ್ , ಅಬ್ಬಿಫಾಲ್ಸ್ , ನಿಸರ್ಗಧಾಮ , ಗೋಲ್ಡನ್ ಟೆಂಪಲ್, ಹಾರಂಗಿ ಡ್ಯಾಮ್ , ಪ್ರವಾಸ ವೆಚ್ಚ:500 (ಮಕ್ಕಳಿಗೆ 450 ರೂ ) ಮಂಗಳೂರು – ಕೊಲ್ಲೂರು ಪ್ಯಾಕೇಜ್ : ಮಾರಣಕಟ್ಟೆ ಕೊಲ್ಲೂರು , ಕಮಲಶಿಲೆ , ಉಚ್ಚಿಲ ಪ್ರವಾಸ ವೆಚ್ಚ:400(ಮಕ್ಕಳಿಗೆ 350 ರೂ) ಮಂಗಳೂರು – ಪುತ್ತೂರು ಪ್ಯಾಕೇಜ್ :ವಿಟ್ಲ ಪಂಚಲಿಂಗೇಶ್ವರ , ಮೃತ್ಯುಂಜೇಶ್ವರ , ಉಮಾಮಹೇಶ್ವರಿ,ಪುತ್ತೂರು ಮಹಾಲಿಂಗೇಶ್ವರ, ಗೆಜ್ಜೆಗಿರಿ , ಹನುಮಗಿರಿ ಪ್ರವಾಸ ವೆಚ್ಚ : 400 ( ಮಕ್ಕಳಿಗೆ 350 ರೂ. ) ಮಂಗಳೂರು ಟೂರ್ ಪ್ಯಾಕೇಜ್: ಕದ್ರಿ,ನಂದಾವರ , ಸುರ್ಯ, ಕನ್ಯಾಡಿ ,ಧರ್ಮಸ್ಥಳ , ಸೌತಡ್ಕ ,ಉಪ್ಪಿನಂಗಡಿ , ಪುತ್ತೂರು ,ವಿಟ್ಲ ಪಂಚಲಿಂಗೇಶ್ವರ,ಪ್ರವಾಸ ವೆಚ್ಚ :400(ಮಕ್ಕಳಿಗೆ 350 ರೂ.) ಮಂಗಳೂರು ಟೂರ್ ಪ್ಯಾಕೇಜ್ 2:ಕುಡುಪು , ಮೂಡುಬಿದಿರೆ ,ಕೊಡ್ಯಡ್ಕ ನೆಲ್ಲಿತೀರ್ಥ.ಪ್ರವಾಸ ವೆಚ್ಚ : 300 ರೂ. (ಮಕ್ಕಳಿಗೆ 250 ರೂ.) ಮಂಗಳೂರು ಟೂರ್ ಪ್ಯಾಕೇಜ್ 3 : ಮಂಗಳಾದೇವಿ ,ಪೊಳಲಿ , ಕಟೀಲು , ಉಚ್ಚಿಲ ಬಪ್ಪನಾಡು , ಸಸಿಹಿತ್ಲು.ಪ್ರವಾಸ ವೆಚ್ಚ : 300 ರೂ . ( ಮಕ್ಕಳಿಗೆ 250 ರೂ ).