ಮಂಗಳೂರು: ಕಂಪೌಂಡ್ ಕುಸಿದು ಮನೆ ಮೇಲೆ ಬಿದ್ದು ಒಂದೇ ಕುಟುಂಬದ ನಾಲ್ಕು ಜನ ಮೃತ ಪಟ್ಟ ಉಳ್ಳಾಳ ತಾಲೂಕಿನ ಕುತ್ತಾರು ಸಮೀಪ ಮದನಿ ನಗರಕ್ಕೆ ಕಂದಾಯ ಸಚಿವ ಕೃಷ್ಣಬೈರೇ ಗೌಡ ಭೇಟಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಿದರು.ಮುಖ್ಯಮಂತ್ರಿಗಳೂ ಸಂತಾಪ ವ್ಯಕ್ತ ಪಡಿಸಿದ್ದಾರೆ. ತಕ್ಷಣ ಘಟನಾ ಸ್ಥಳಕ್ಕೆ ಹೋಗಿ
ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಹೀಗಾಗಿ ತಕ್ಷಣ ಬಂದು ಘಟನಾ ಸ್ಥಳವನ್ನು ವೀಕ್ಷಿಸಿದ್ದೇನೆ. ರಾತ್ರಿ ಇಡೀ ಸುರಿದ ಮಳೆಯಿಂದಾಗಿ ಮುಂಜಾವಿನ ವೇಳೆಯಲ್ಲಿ ಪಕ್ಕದ ಮನೆಯ ಕಂಪೌಂಡ್ ಗೋಡೆ ಕುಸಿತದಿಂತ ಅವಘಡ ಉಂಟಾಗಿದೆ. ಜಾಗದ ಕೊರತೆ ಇರುವ ಕಾರಣದಿಂದ ಈ ರೀತಿ ಮನೆ ಕಟ್ಟಿಕೊಳ್ಳುವುದು ಅನಿವಾರ್ಯಾ. ಆದರೆ ಸೂಕ್ತ ರಕ್ಷಣಾ ಕಾರ್ಯಗಳನ್ನು ಜನರು ಮಾಡಿಕೊಳ್ಳಬೇಕು. ಇಂತಹ ಪ್ರದೇಶವನ್ನು ಗುರುತಿಸುವಂತೆ ಪಂಚಾಯತ್ಗಳಿಗೆ ಸೂಚನೆ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾವಿರಾರು ಮನೆಗಳು ಇಂತಹ ಸ್ಲೋಪ್ ಇರುವ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಇಂತಹ ಜಾಗವನ್ನು ಗುರುತಿಸಿ ಅಪಾಯದ ಸ್ಥಿತಿಯಲ್ಲಿ ಇದೆ ಎಂದು ಗುರುತಿಸಿ ತಾತ್ಕಾಲಿಕವಾಗಿ ಅವರ ಸ್ಥಳಾಂತರದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಸ್ಪೀಕರ್ ಯು.ಟಿ.ಖಾದರ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ನಳಿನ್ ಕುಮಾರ್ ಕಟೀಲ್, ಆರ್.ಪದ್ಮರಾಜ್ ಮತ್ತಿತರರು ಭೇಟಿ ನೀಡಿದರು.