ಸುಳ್ಯ: ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಸುಳ್ಯ ತಾಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಗೆ 15 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 2025-26 ರಿಂದ 2029-30ನೇ ಸಾಲಿಗೆ 5 ವರ್ಷಗಳ ಅವಧಿಗೆ 15 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗೆ ಡಿ.15ರಂದು ಚುನಾವಣೆ ನಿಗದಿಯಾಗಿತ್ತು. 15 ಸ್ಥಾನಕ್ಕೆ 18 ಮಂದಿ
ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಡಿ.9ರಂದು 3 ಮಂದಿ ನಾಮಪತ್ರ ಹಿಂಪಡೆದ ಕಾರಣ 15 ಮಂದಿ ಅವಿರೋಧವಾಗಿ ಆಯ್ಕೆಯಾದರು.
ಕೆ.ಸುಧಾಕರ ಪ್ರಭು, ಹರಿಪ್ರಕಾಶ್ ಕೆ.ಎಸ್, ಎ.ಟಿ.ಕುಸುಮಾಧರ, ಎ.ಶರತ್ ಕುಮಾರ್, ಎ.ಎಸ್.ಮನ್ಮಥ, ಎ.ಉಮಾನಾಥ, ಶ್ಯಾಮಪ್ರಸಾದ್, ಚಂದ್ರ ಕೋಲ್ಚಾರ್, ನಾರಾಯಣ ಗೌಡ, ಸವಿನ್.ಕೆ.ಬಿ, ಕರುಣಾಕರ ಎ.ಎಸ್. ಅಡ್ಪಂಗಾಯ,ರುಕ್ಮಯ್ಯ ಗೌಡ, ಕುಮಾರ ಸ್ವಾಮಿ, ಅಣ್ಣಾಜಿ ಗೌಡ, ಕೆ.ಎಸ್.ಮಹೇಶ್ಕುಮಾರ್ ಕರಿಕ್ಕಳ ಅವಿರೋಧವಾಗಿ ಆಯ್ಕೆಯಾದರು.
ನಾಮಪತ್ರ ಸಲ್ಲಿಸಿದ್ದ ಎಂ.ಬಿ.ಸದಾಶಿವ, ಅಶೋಕ ಪ್ರಭು, ಲೋಕೇಶ್ ಅಡ್ಡಂತ್ತಡ್ಕ ನಾಮಪತ್ರ ಹಿಂಪಡೆದರು.