ಬೆಳ್ಳಾರೆ: ಕರ್ನಾಟಕ ಪಬ್ಲಿಕ್ ಸ್ಕೂಲ್, ಬೆಳ್ಳಾರೆ ಇದರ ಪ್ರಾಥಮಿಕ ವಿಭಾಗದಲ್ಲಿ 2023 24ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವನ್ನು ಸಂಭ್ರಮದಿಂದ ನಡೆಸಲಾಯಿತು. ಹೊಸದಾಗಿ ದಾಖಲಾದ ವಿದ್ಯಾರ್ಥಿಗಳನ್ನು ಬ್ಯಾಂಡ್ ವಾಲಗದೊಂದಿಗೆ ಶಾಲೆಯೊಳಗೆ ಬರಮಾಡಿಕೊಳ್ಳಲಾಯಿತು. ಶಿಕ್ಷಕಿಯರು ಮಕ್ಕಳಿಗೆ ಆರತಿ ಬೆಳಗಿ
ಸ್ವಾಗತಿಸಿದರೆ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ ಪನ್ನೆ, ಕೆಪಿಎಸ್ನ ಅಧ್ಯಕ್ಷ ಶ್ರೀನಾಥ್ ರೈ ಬಾಳಿಲ ಮತ್ತು ಎಸ್ ಡಿ ಎಂ ಸಿ ಸದಸ್ಯರು ಮಕ್ಕಳಿಗೆ ಹೂ ನೀಡುವುದರ ಮೂಲಕ ಶಾಲೆಗೆ ಸ್ವಾಗತಿಸಿದರು. ನಂತರ 2023-24 ನೇ ಸಾಲಿನ ಶೈಕ್ಷಣಿಕ ವರ್ಷದ ರೂಪರೇಷೆಗಳ ಬಗ್ಗೆ ಪೋಷಕರ ಸಭೆ
ನಡೆಸಲಾಯಿತು. ಈ ಸಭೆಯ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಕಾರ್ಯಾಧ್ಯಕ್ಷ ಶ್ರೀನಾಥ್ ರೈ ಬಾಳಿಲ ವಹಿಸಿಕೊಂಡಿದ್ದರು. ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೆಪಿಎಸ್ಸಿ ಉಪಪ್ರಾಂಶುಪಾಲೆ ಉಮಾಕುಮಾರಿ, ಎಸ್ ಡಿ ಎಂ ಸಿ ಸದಸ್ಯ ಪ್ರದೀಪ್ ಕುಮಾರ್ ರೈ ಪನ್ನೆ ಮಾತನಾಡಿದರು. ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ಅತಿಥಿಗಳು ವಿದ್ಯಾರ್ಥಿಗಳಿಗೆ ವಿತರಿಸಿದರು.
ಶಾಲಾ ಮುಖ್ಯ್ಯೊಪಾಧ್ಯಾಯರಾದ ಮಾಯಿಲಪ್ಪ ಜಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಭವ್ಯ, ವೀಣಾ, ಮಣಿಕಂಠ, ಎಸ್ ಡಿ ಎಂ ಸಿ ಸಿವಿಲ್ ಕಾಮಗಾರಿ ಸಮಿತಿ ಅಧ್ಯಕ್ಷ ಹರ್ಷ ಜೋಗಿಬೆಟ್ಟು, ಎಸ್ ಡಿ ಎಂ ಸಿ ಸದಸ್ಯರಾದ ಮುರಳಿ, ಮಹಮ್ಮದ್ ಹಾರಿಫ್, ಪಾರ್ವತಿ, ಶ್ರೀಮತಿ ನೆಸೀಮಾ, ತಾಯಂದಿರ ಸಮಿತಿಯ ಅಧ್ಯಕ್ಷೆ ಪ್ರಿಯಾಂಕ, ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕರಾದ ದಿನೇಶ್ ಮಾಚಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಬೇಸಿಗೆ ರಜೆಯನ್ನು ಮುಗಿಸಿ ಶಾಲೆಯತ್ತ ಮರಳಿದ ವಿದ್ಯಾರ್ಥಿಗಳನ್ನು ಖುಷಿಪಡಿಸಲು ಸೆಲ್ಫಿ ಕಾರ್ನರನ್ನು ಇಡಲಾಗಿತ್ತು. ಇಲ್ಲಿ ವಿದ್ಯಾರ್ಥಿಗಳು ಸೆಲ್ಫಿ ಕ್ಲಿಕ್ಕಿಸಿಕೊಂಡು ಆನಂದಿಸಿದರು.