ಸುಳ್ಯ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ ವತಿಯಿಂದ 67ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ರಾಜ್ಯಾದ್ಯಂತ ಹಮ್ಮಿಕೊಂಡ ಕೋಟಿ ಕಂಠ ಗಾಯನದ ಅಂಗವಾಗಿ ಸುಳ್ಯ ಬಿಜೆಪಿ ಮಂಡಲ ಸಮಿತಿ ವತಿಯಿಂದ ಸುಳ್ಯ ಹಾಗು ಕಡಬದಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಕಡಬದ ಸಿ.ಎ.ಬ್ಯಾಂಕ್
ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಎಸ್. ಅಂಗಾರ ಭಾಗವಹಿಸಿದರು.ಕಾರ್ಯಕ್ರಮದಲ್ಲಿ ಸುಳ್ಯ ಬಿ.ಜೆ.ಪಿ. ಮಂಡಲ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಪ್ರಮುಖರಾದ ಕೃಷ್ಣ ಶೆಟ್ಟಿ ಕಡಬ, ರಮೇಶ್ ಕಲ್ಪುರೆ, ಗಿರೀಶ್ ಶೆಟ್ಟಿ ಕಡಬ, ಧರ್ಮಪಾಲ ರಾವ್ ಕಜೆ, ಪ್ರದೀಪ್ ರೈ ಮನವಳಿಕೆ, ಸತೀಶ್ ನಾಯಕ್ ಕಡಬ, ಕೃಷ್ಣ ಎಂ.ಆರ್., ಸುರೇಶ್ ದೇಂತಾರು, ಕೇಶವ ಬೇರಿಕೆ, ಪ್ರಕಾಶ್ ಎನ್.ಕೆ., ಮೇದಪ್ಪ ಗೌಡ ಡೆಪ್ಪುಣಿ, ರಘುರಾಮ ನಾಯ್ಕ್, , ಆಶಾ ತಿಮ್ಮಪ್ಪ ಗೌಡ, ಪುಲಸ್ತ್ಯ ರೈ, ಶುಭದಾ ಎಸ್.ರೈ., ಜಯಂತಿ ಆರ್ ಗೌಡ, ಗಂಗಾರತ್ನ ವಸಂತ್ ಇನ್ನಿತರರು ಉಪಸ್ಥಿತರಿದ್ದರು.

ಸುಳ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ, ಪ್ರಮುಖರಾದ ಹರೀಶ್ ಬೂಡುಪನ್ನೆ, ಸುನಿಲ್ ಕೇರ್ಪಳ, ಮಹೇಶ್ ಕುಮಾರ್ ಮೇನಾಲ, ಬೂಡು ರಾಧಾಕೃಷ್ಣ ರೈ, ಶೀನಪ್ಪ ಬಯಂಬು, ಪುಷ್ಪಾವತಿ ಬಾಳಿಲ, ಸುಧಾಕರ ತೊಡಿಕಾನ, ಜಿನ್ನಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.