ಸುಳ್ಯ: ಅಕ್ಟೋಬರ್ ೨೮ರಂದು ರಂದು ೬೭ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ನಡೆಯಿತು.ಈ ಕಾರ್ಯಕ್ರಮದಲ್ಲಿ
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಅಧ್ಯಕ್ಷ ಡಾ. ಕೆ. ವಿ. ಚಿದಾನಂದ ಹಾಗೂ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ, ಸದಸ್ಯರೂ ಮತ್ತು ಕೆ.ವಿ.ಜಿ ಮೆಡಿಕಲ್ ಕಾಲೇಜ್ನ ಎಕ್ಸಿಕ್ಯುಟೀವ್ ಡೈರೆಕ್ಟರ್ ಅಕ್ಷಯ್ ಕೆ. ಸಿ, ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಪ್ರೊ. ಡಾ. ಲೀಲಾಧರ್ ಡಿ. ವಿ., ಕೆ.ವಿ.ಜಿ ಮೆಡಿಕಲ್ ಕಾಲೇಜ್ನ ಆಡಳಿತಾಧಿಕಾರಿ ಶ್ರೀ. ಜಗದೀಶ್ ಅಡ್ತಲೆ, ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ, ಸ್ನಾತಕೋತ್ತರ ವಿದ್ಯಾರ್ಥಿಗಳು, ಕಲಿಕಾ ವೈದ್ಯರುಗಳು ಭಾಗವಹಿಸಿ, ಆಯ್ದ ಕನ್ನಡ ಹಾಡುಗಳನ್ನು ಹಾಡಿ ಕೋಟಿ ಕಂಠ ಗಾಯನವನ್ನು ನೆರವೇರಿಸಿದರು. ಡಾ. ಅನುಷಾ ಮಡಪ್ಪಾಡಿ ಸಂಕಲ್ಪ ವಿಧಿ ಬೋಧಿಸಿದರು.